ವಾಮದಪದವಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಐ.ಕ್ಯೂಎಸಿ, ರಾಷ್ಟ್ರೀಯ ಸೇವಾ ಯೋಜನೆ, ಯೂತ್ ರೆಡ್‌ಕ್ರಾಸ್ ಹಾಗೂ ರೋವರ್ಸ್ ಮತ್ತು ರೇಂಜರ್ಸ್ ಆಶ್ರಯದಲ್ಲಿ ವಿಶ್ವ ಯೋಗ ದಿನವನ್ನುಯೋಗ ಪ್ರಾತ್ಯಕ್ಷಿಕೆಯ ಮೂಲಕ ಆಚರಿಸಲಾಯಿತು.
ಐಕ್ಯೂಎಸಿ ಸಂಚಾಲಕರಾದ ಡಾ.ರವಿ ಎಂ.ಎನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಂಶುಪಾಲರಾದ ಪ್ರೊ. ಹರಿಪ್ರಸಾದ್ ಬಿ.ಶೆಟ್ಟಿ ಅಧ್ಯಕ್ಷತೆ ವಹಿಸಿ ಯೋಗದ ಮಹತ್ವದ ಬಗ್ಗೆ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ಡಾ.ಅರುಣ್ ಪಿ.ಜಿ ಕಾರ್ಯಕ್ರಮವನ್ನು ಪ್ರಾತ್ಯಕ್ಷಿಕೆಯ ಮೂಲಕ ನಡೆಸಿಕೊಟ್ಟು ಯೋಗದಿಂದ ಹೇಗೆ ಆರೋಗ್ಯವಂತ ಜೀವನ ನಡೆಸಬಹುದು, ಒತ್ತಡ ನಿರ್ವಹಣೆಯಲ್ಲಿ ಯೋಗದ ಪಾತ್ರದ ಬಗ್ಗೆ ತರಬೇತಿ ನೀಡಿದರು. ಎನ್.ಎಸ್.ಎಸ್ ಯೋಜನಾಧಿಕಾರಿಗಳಾದ ಪ್ರೊ.ರೊನಾಲ್ಡ್ ಪ್ರವೀಣ್ ಕೊರೆಯ ಹಾಗೂ ಡಾ.ಮೇರಿ ಎಂ.ಜೆ ಉಪಸ್ಥಿತರಿದ್ದರು..ವಾಣಿ ಕಾರ್ಯಕ್ರಮ ನಿರೂಪಿಸಿದರು, ಭವ್ಯ ವಂದಿಸಿದರು. ಸಂಧ್ಯಾ ಪ್ರಾರ್ಥನೆ ನೆರವೇರಿಸಿದರು.