ಮಧ್ಯಪ್ರದೇಶದ ಮನ್ಸೂರ್ ಎಂಬಲ್ಲಿ ಏಳು ವರ್ಷದ ಬಾಲಕಿಯನ್ನು ಅತ್ಯಾಚಾರಗೈದ ಆರೋಪಿ ಇರ್ಫಾನ್ ಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿ ಬಿ.ಸಿ.ರೋಡಿನ ಮಿನಿ ವಿಧಾನಸೌಧದಲ್ಲಿ ವಿಶ್ವ ಹಿಂದು ಪರಿಷತ್ತು, ಬಜರಂಗದಳ ಬಂಟ್ವಾಳ ಪ್ರಖಂಡ ವತಿಯಿಂದ ತಹಶೀಲ್ದಾರ್ ಮೂಲಕ ಮನವಿಯನ್ನು ಶುಕ್ರವಾರ ಸಲ್ಲಿಸಲಾಯಿತು.
ವಿಹಿಂಪದ ಜಿಲ್ಲಾ ಗೋರಕ್ಷಾ ಪ್ರಮುಖ್ ಸರಪಾಡಿ ಅಶೋಕ್ ಶೆಟ್ಟಿ, ಜಿಲ್ಲಾ ಸಹಸಂಚಾಲಕ ಗುರುರಾಜ ಬಂಟ್ವಾಳ, ತಾಲೂಕು ಸಂಚಾಲಕ ಅಕೇಶ್ ಬೆಂಜನಪದವು, ನರಿಕೊಂಬು ಗ್ರಾಮ ಪಂಚಾಯಿತಿ ಅಧ್ಯಕ್ಷ ಯಶೋಧರ ಕರ್ಬೆಟ್ಟು, ಪ್ರಮುಖರಾದ ಜನಾರ್ದನ ಬೊಂಡಾಲ, ಪ್ರಮೋದ್ ಅಜ್ಜಿಬೆಟ್ಟು, ದಕ್ಷಣ್, ರೋಹಿತ್ ಪಣೋಲಿಬೈಲು, ಮುಖೇಶ್ ಪಂಜಿಕಲ್ಲು, ಕಿರಣ್ ಕುಮ್ಡೇಲು, ಪ್ರವೀಣ್ ಕಲಾಯಿ, ಬಬಿತಾ ಕೋಟ್ಯಾನ್, ವಿಶ್ವನಾಥ ಕಲಾಯಿ, ಮಹೇಶ್ ಕಾವೇಶ್ವರ, ಪ್ರಸನ್ನ ಮೇಲ್ಕಾರ್, ಪವನ್ ಮೇಲ್ಕಾರ್, ರಕ್ಷಿತ್, ಅಜಿತ್, ಸಂತೋಷ್ ಮತ್ತು ಭರತ್ ಉಪಸ್ಥಿತರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…