ಬಂಟ್ವಾಳದ ವಿದ್ಯಾಗಿರಿಯಲ್ಲಿರುವ ಎಸ್.ವಿ.ಎಸ್. ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ ರಕ್ಷಕರ ಸಂಘದ ಮಹಾಸಭೆ ಶ್ರೀಧರ ಬಿ. ಅಧ್ಯಕ್ಷತೆಯಲ್ಲಿ ನಡೆಯಿತು.
೨೦೧೭–೧೮ನೇ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನೂ, ಎಸ್.ಎಸ್.ಎಲ್.ಸಿ ೨೦೧೮ರ ಪಬ್ಲಿಕ್ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ೩೮ ವಿದ್ಯಾರ್ಥಿಗಳನ್ನು ನಗದು ಬಹುಮಾನ ಹಾಗೂ ಪ್ರಮಾಣಪತ್ರಗಳನ್ನಿತ್ತು ಸನ್ಮಾನಿಸಲಾಯಿತು.
ಶಾಲೆಗೆ ಪ್ರಥಮ ಹಾಗೂ ದ್ವಿತೀಯ ಸ್ಥಾನಿಗಳಾದ ವಿಧಾತ್ರಿ ಸೋಮಯಾಜಿ ಬಿ. ಹಾಗೂ ಕ್ಷಮಾ ಆಚಾರ್ಯ ಬಿ. ಅವರಿಗೆ ಚಿನ್ನದ ಪದಕಗಳನ್ನಿತ್ತು ಗೌರವಿಸಲಾಯಿತು. ನಿವೃತ್ತಿಯ ಅಂಚಿನಲ್ಲಿರುವ ಶಾಲಾ ಮುಖ್ಯೋಪಾಧ್ಯಾಯ ಸೋಮನಾಥ ಭಟ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಬಳಿಕ ಶೈಕ್ಷಣಿಕ ವರ್ಷ ೨೦೧೮–೧೯ಕ್ಕೆ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಶ್ರೀಧರ ಬಿ. ಅಧ್ಯಕ್ಷರಾಗಿಯೂ, ರೂಪಾ ಶೆಟ್ಟಿ ಉಪಾಧ್ಯಕ್ಷರಾಗಿಯೂ ಪುನರಾಯ್ಕೆಯಾದರು. ನೂತನ ಖಜಾಂಚಿ ಶ್ರೀ ಹರಿಶ್ಚಂದ್ರ, ನಿಕಟಪೂರ್ವ ಅಧ್ಯಕ್ಷ ಜಗದೀಶ ಯಡಪಡಿತ್ತಾಯ, ಶಾಲಾ ಸಂಚಾಲಕರಾದ ಭಾಮಿ ವಿಠಲ್ದಾಸ್ ಶೆಣೈ, ಆಡಳಿತಾಧಿಕಾರಿ ಐತಪ್ಪ ಪೂಜಾರಿ, ಮುಖ್ಯೋಪಾಧ್ಯಾಯಿನಿ ಸುಜಾತ ಬಿ. ಉಪಸ್ಥಿತರಿದ್ದರು. ರವಿ ಕಾರ್ಯಕ್ರಮ ನಿರೂಪಿಸಿದರು.