ಯುನೆಸ್ಕೋ ಅಂತಾರಾಷ್ಟ್ರೀಯ ಸಭೆಯಲ್ಲಿ ಭಾಗವಹಿಸಲು ಜರ್ಮನಿಯ ಬಿಟಿಯು ಯುನಿವರ್ಸಿಟಿಯಿಂದ ಭಾಗವಹಿಸುತ್ತಿರುವ ಪ್ರತಿನಿಧಿಗಳಲ್ಲಿ ಭಾರತದ ಬಂಟ್ವಾಳದ ಸಿಂಧೂರ ಟಿ.ಪಿ. ಸೇರಿದ್ದಾರೆ.
ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಯುನೆಸ್ಕೊ ವತಿಯಿಂದ ವಿಶ್ವ ಪರಂಪರಾ ಪಟ್ಟಿಗೆ ನಾನಾ ರಾಷ್ಟ್ರಗಳ ಐತಿಹಾಸಿಕ ನಿವೇಶನಗಳನ್ನು ಸೇರ್ಪಡೆಗೊಳಿಸುವ ಮಹಾಸಭೆ ಬಹಾರಿನ್ ನ ಮನಾಮದಲ್ಲಿ ನಡೆಯುತ್ತಿದೆ. ಈ ಸಭೆಗೆ ಜರ್ಮನಿಯ ಕೊಟ್ಟಸ್ ಬಿಟಿಯು ವಿಶ್ವವಿದ್ಯಾಲಯವನ್ನು ಸಿಂಧೂರ ಟಿ.ಪಿ. ಪ್ರತಿನಿಧಿಸುತ್ತಿದ್ದು, ಈಕೆ ಬಿ.ಸಿ.ರೋಡಿನ ಸಂಚಯಗಿರಿಯಲ್ಲಿರುವ ರಾಣಿ ಅಬ್ಬಕ್ಕ ಸಂಶೋಧನಾ ಕೇಂದ್ರದ ರೂವಾರಿಗಳಾದ ಪ್ರೊ. ತುಕಾರಾಮ ಪೂಜಾರಿ ಮತ್ತು ಡಾ. ಆಶಾಲತಾ ಸುವರ್ಣ ಅವರ ಪುತ್ರಿ.
ವಿಶ್ವ ಪರಂಪರಾಪಟ್ಟಿಗೆ ಭಾರತದ ಮುಂಬೈನ ವಿಕ್ಟೋರಿಯನ್ ಗೋಥಿಕ್ ಮತ್ತು ಆರ್ಟ್ ಡೆಕೊ ಎನ್ಸೆಂಬೆಲ್ಸ್ ಆಯ್ಕೆಗೊಂಡಿವೆ. 10 ದಿನಗಳ ಕಾಲ ಈ ಸಭೆ ನಡೆಯಲಿದೆ.