ಪ್ರಖ್ಯಾತ ಪ್ರಸೂತಿ ತಜ್ಞೆ ಉಡುಪಿಯ ಡಾ. ಸಾವಿತ್ರಿ ದೈತೋಟ ಬರೆದಿರುವ ಪ್ರಕೃತಿ ಸಹಜ ಮಹಿಳೆ – ಒಂದು ವೈದ್ಯಕೀಯ ವಿಶ್ಲೇಷಣೆ ಎಂಬ ಪುಸ್ತಕವನ್ನು ಧರ್ಮಸ್ಥಳದಲ್ಲಿ ರಾಜರ್ಷಿ ಡಾ. ಡಿ ವೀರೇಂದ್ರ ಹೆಗ್ಗಡೆ ಬಿಡುಗಡೆಗೊಳಿಸಿದರು.
ಮಹಿಳಾ ಜೀವನದ ವಿವಿಧ ಹಂತಗಳಲ್ಲಿ ಉಂಟಾಗುವ ಸಾಮಾನ್ಯ ತೊಂದರೆಗಳ ಬಗ್ಗೆ ಅರಿವು ಹಾಗೂ ಅವುಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿ ತಮ್ಮ ವೃತ್ತಿಜೀವನದಲ್ಲಿ ತಾವು ನೀಡಿದ ಶುಶ್ರೂಷೆಗಳ ಬಗ್ಗೆ ವಿವರವಾಗಿ ಸಾಮಾನ್ಯರಿಗೂ ಮನದಟ್ಟಾಗುವಂತೆ ಡಾ. ಸಾವಿತ್ರಿ ದೈತೋಟ ಅವರು ಈ ಪುಸ್ತಕದಲ್ಲಿ ವಿವರಣೆ ನೀಡಿದ್ದಾರೆ. ಸ್ತ್ರೀಯರು ತಮ್ಮನ್ನು ಕಾಡುತ್ತಿರುವ ಹಲವಾರು ಸಮಸ್ಯೆಗಳಿಗೆ ಪರಿಹಾರವನ್ನು ಈ ಪುಸ್ತಕದಿಂದ ಪಡೆದುಕೊಳ್ಳಬಹುದಾಗಿದೆ. ಈ ಸಂದರ್ಭ ಹಿರಿಯ ಇಂದ್ರಜಾಲ ಕಲಾವಿದ ಶಂಕರ ಭಟ್ (ಪ್ರೊ. ಶಂಕರ್) ಮೊದಲಾದವರು ಉಪಸ್ಥಿತರಿದ್ದರು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…