ಬಂಟ್ವಾಳ ತಾಲೂಕು ಕಚೇರಿಯ ಭೂಮಿ ಶಾಖೆಯಲ್ಲಿ ಸರಿಸುಮಾರು 2 ಲಕ್ಷ ಪಹಣಿಗಳಿಗೆ ಡಿಜಿಟಲ್ ಸಹಿ ನಡೆಯುವ ಪ್ರಕ್ರಿಯೆ ಇರುವ ಕಾರಣ ಜುಲೈ 13ರವರೆಗೆ ಭೂಮಿ ಶಾಖಾ ಅರ್ಜಿ ನೀಡುವ ಕಿಯೋಸ್ಕ್ ಮತ್ತು ಪಹಣಿ ವಿತರಣಾ ಕೆಲಸ ಕಾರ್ಯಗಳು ಸ್ಥಗಿತಗೊಳ್ಳಲಿವೆ.
ಈ ಪ್ರಕ್ರಿಯೆ ಜುಲೈ 2ರಂದು ಆರಂಭಗೊಂಡಿದ್ದು 13ರವರೆಗೆ ನಡೆಯಲಿದೆ. ಸುಮಾರು 2 ಲಕ್ಷ ಪಹಣಿಗಳಿಗೆ ಡಿಜಿಟಲ್ ಸಹಿ ಹಾಕಬೇಕಾದ ಕಾರಣ ಕೆಲಸ ಕಾರ್ಯಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದ್ದು, ಸಾರ್ವಜನಿಕರು ಸಹಕರಿಸಬೇಕಾಗಿ ತಹಶೀಲ್ದಾರ್ ಪುರಂದರ ಹೆಗ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…