ಬಂಟ್ವಾಳ ತಾಲೂಕಿನಲ್ಲಿ ಜುಲೈ 12, 19 ಮತ್ತು 26ರಂದು ಕಂದಾಯ ಅದಾಲತ್ ಗಳು ನಡೆಯಲಿವೆ.
ಬಂಟ್ವಾಳ ಹೋಬಳಿ ಮಟ್ಟದ ಎಲ್ಲ ಗ್ರಾಮಗಳಿಗೆ ಸಂಬಂಧಿಸಿದ ಕಂದಾಯ ಅದಾಲತ್ ಕಾವಳಪಡೂರು ಗ್ರಾಮ ಪಂಚಾಯತ್ ಸಭಾಭವನದಲ್ಲಿ 12ರಂದು ನಡೆಯಲಿದೆ. ವಿಟ್ಲ ಹೋಬಳಿ ಮಟ್ಟದ ಎಲ್ಲ ಗ್ರಾಮಗಳಿಗೆ ಸಂಬಂಧಿಸಿ ಅದಾಲತ್ 19ರಂದು ವಿಟ್ಲ ದ.ಕ.ಜಿಪಂ ಮಾ.ಹಿ.ಪ್ರಾ.ಶಾಲೆಯ ಶತಮಾನೋತ್ಸವ ಸಭಾಭವನದಲ್ಲಿ ನಡೆಯಲಿವೆ. ಬಿ.ಮೂಡ, ಮೇರೆಮಜಲು, ಕೊಡ್ಮಣ್, ಪುದು, ಕಳ್ಳಿಗೆ, ತುಂಬೆ ಅಮ್ಮುಂಜೆ, ಕರಿಯಂಗಳ, ಬಡಗಬೆಳ್ಳೂರು, ತೆಂಕಬೆಳ್ಳೂರು ಗ್ರಾಮಗಳಿಗೆ ಸಂಬಂಧಿಸಿ ಪಾಣೆಮಂಗಳೂರು ಹೋಬಳಿ ಕಂದಾಯ ಅದಾಲತ್ ಅಮ್ಮುಂಜೆಗ್ರಾಪಂ ಸಭಾಭವನದಲ್ಲಿ 26ರಂದು ನಡೆಯಲಿದೆ ಎಂದು ತಹಶೀಲ್ದಾರ್ ಪುರಂದರ ಹೆಗ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…