ಜಿಲ್ಲೆಯಾದ್ಯಂತ ತನ್ನ ವಿಶಿಷ್ಟ ರೀತಿಯ ಸಮಾಜಸೇವೆಯಲ್ಲಿ ಹೆಸರುವಾಸಿಯಾಗಿರುವ ಬ್ಯಾರಿ ನಿಖಾಃ ಹೆಲ್ಪ್ ಲೈನ್ ತಂಡದ ವಾರ್ಷಿಕ ಮಹಾಸಭೆಯು ಬಿ.ಸಿ.ರೋಡಿನ ಪದ್ಮಾ ಕಾಂಪ್ಲೆಕ್ಸ್ ಆಡಿಟೋರಿಯಮ್ ನಲ್ಲಿ ನಡೆಯಿತು.
ಈ ಸಂದರ್ಭ ತಂಡದ ವತಿಯಿಂದ ಆಯೋಜಿಸಲಾದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಯುವ ಲೇಖಕರಿಗೆ ಬಹುಮಾನ ವಿತರಿಸಲಾಯಿತು. ಪ್ರಥಮ ಸ್ಥಾನ ಗಳಿಸಿದ ಲೇಖಕ ರಹಿಮಾನ್ ಮಿತ್ತೂರು ರವರಿಗೆ ತಂಡದ ಸ್ಥಾಪಕಾಧ್ಯಕ್ಷರಾದ ರಾಶ್ ಬ್ಯಾರಿ ಪ್ರಮಾಣ ಪತ್ರದೊಂದಿಗೆ ಚಿನ್ನದ ನಾಣ್ಯ ಮತ್ತು ಟ್ರೋಫಿ ಹಾಗೂ ದ್ವಿತೀಯ ಸ್ಥಾನ ಗಳಿಸಿದ ಶರೀಫ್ ಕಡಬ ರವರಿಗೆ ತಂಡದ ಉಪಾಧ್ಯಕ್ಷರಾದ ವಹಾಬ್ ಗೂಡಿನಬಳಿ ಟ್ರೋಫಿ ಹಾಗೂ ಪ್ರಮಾಣ ಪತ್ರವನ್ನು ಹಸ್ತಾಂತರಿಸಿದರು. ಸಮಾಜ ಸೇವೆಯಲ್ಲಿ ಉತ್ತಮವಾಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿ ತಂಡದ ಏಳಿಗೆಗಾಗಿ ಶ್ರಮಿಸಿದ ಶರೀಫ್ ಝೈನಿ ಹಾಗೂ ಸುಹೈಲ್ ತೊಕ್ಕೊಟ್ಟು ಇವರಿಗೆ ತಂಡದ ವತಿಯಿಂದ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ಶರೀಫ್ ಝೈನಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ತಂಡದ ಕಾರ್ಯದರ್ಶಿಗಳಾದ ಮಜೀದ್ ಬಿಕರ್ನಕಟ್ಟೆ, ಆಶಿಕ್ ಕುಕ್ಕಾಜೆ ಹಾಗೂ ಖಾಲಿದ್ ಮಂಗಳೂರು ಹಾಗೂ ಯುವ ಬರಹಗಾರ ರಹಿಮಾನ್ ಮಠ ಉಪಸ್ಥಿತರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…