ಬದುಕಿನಲ್ಲಿ ಪ್ರಪಂಚದ ಎಲ್ಲಾ ರೀತಿಯ ಅನುಭವಗಳು ಕಣ್ಣಿನಿಂದ ನೋಡಿ ಆಸ್ವಾದಿಸುವ ಶಕ್ತಿ ನಮಗೆ ಬಂದಿದೆ. ಕಣ್ಣಿನ ಆರೈಕೆ ಸಣ್ಣ ಮಮಕ್ಕಳಿಗೆ ತೀರಾ ಅಗತ್ಯವಿದೆ. ಮೊಬೈಲ್ ಮೊದಲಾದ ಆಕರ್ಷಣೆಗಳು ವಿಧ್ಯಾರ್ಥಿಗಳಿಗೆ ಕಣ್ಣಿನ ತೊಂದರೆ ಗೆ ಕಾರಣ. ಈ ಬಗ್ಗೆ ಮಕ್ಕಳು ಎಚ್ಚರಿಕೆ ವಹಿಸಬೇಕು ಎಂದು ಉದ್ಯಮಿ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಹೇಳಿದರು.
ಶಂಭೂರಿನ ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢ ಶಾಲೆಯಲ್ಲಿ ಮಕ್ಕಳ ದೃಷ್ಟಿ ದೋಷ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಸಮಾರಂಭ ವನ್ನು ಜೇಸೀ ಐ ಜೋಡುಮಾರ್ಗ ನೇತ್ರಾವತಿ ಹಾಗೂ ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ವತಿಯಿಂದ ಸರ್ಕಾರಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆಯ ಸಹಯೋಗದಲ್ಲಿ ವಿಧ್ಯಾರ್ಥಿಗಳ ಕಣ್ಣಿನ ದೃಷ್ಟಿದೋಷ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು . ಅಧ್ಯಕ್ಷತೆ ಯನ್ನು ಜೇಸೀ ಐ ಜೋಡುಮಾರ್ಗ ನೇತ್ರಾವತಿ ಯ ಅಧ್ಯಕ್ಷರಾದ ಸವಿತಾ ನಿರ್ಮಲ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಲಾ ಮುಖ್ಯ ಶಿಕ್ಷಕ ರಾದ ಕಮಲಾಕ್ಷ ಕಲ್ಲಡ್ಕ, ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ನಿಯೋಜಿತ ಅಧ್ಯಕ್ಷ ರಾದ ಉಮೇಶ್ ನಿರ್ಮಲ್, ಕಾರ್ಯದರ್ಶಿ ಜಯರಾಜ್ ಎಸ್ ಬಂಗೇರ, ಜೇಸೀ ಉಪಾಧ್ಯಕ್ಷರಾದ ರವೀಂದ್ರ ಕುಕ್ಕಾಜೆ, ಜೇಸಿರೆಟ್ ವಿಭಾಗದ ಅಧ್ಯಕ್ಷೆ ಗಾಯತ್ರಿ ಲೋಕೇಶ್, ಯುವ ಜೇಸಿ ಅಧ್ಯಕ್ಷೆ ದಿವ್ಯಾ, ಇಂಟರಾಕ್ಟ್ ಕ್ಲಬ್ ನ ಅಧ್ಯಕ್ಷ ರಾದ ದರ್ಶಿತ್ ಉಪಸ್ತಿತರಿದ್ದರು. ಸರ್ಕಾರಿ ಆಸ್ಪತ್ರೆ ಬಂಟ್ವಾಳ ಇದರ ಕಣ್ಣಿನ ತಪಾಸಣಾ ಅಧಿಕಾರಿ ಶಾಂತ್ ರಾಜ್ ವಿಧ್ಯಾರ್ಥಿಗಳ ಕಣ್ಣು ತಪಾಸಣೆ ನಡೆಸಿ, ಮಕ್ಕಳಿಗೆ ಆರೋಗ್ಯ ಮಾಹಿತಿ ನೀಡಿದರು. ಶಿಕ್ಷಕ ಜೇಸೀ ಹರಿಪ್ರಸಾದ್ ಕುಲಾಲ್ ಸ್ವಾಗತಿಸಿದರು.ಶಿಕ್ಷಕರಾದ ಸುಶೀಲಾ, ಭಾರತಿ , ವರಮಹಾಲಕ್ಷ್ಮೀ , ಪ್ರಕಾಶ್ ಮತ್ತಿತರರು ಹಾಜರಿದ್ದರು. ವಿಧ್ಯಾರ್ಥಿನಿ ಪಾವನ ಧನ್ಯವಾದ ಸಮರ್ಪಣೆ ಮಾಡಿದರು. ಪವನ್ ರಾಜ್ ಕಾರ್ಯಕ್ರಮ ನಿರೂಪಿಸಿದರು.
| ಸಾಹಿತ್ಯದಿಂದ ಸಾಮರಸ್ಯ ಆಶಯ | ಎರಡು ದಿನ ವಿಚಾರ ಮಂಡನೆ, ಸಾಂಸ್ಕೃತಿಕ ಕಾರ್ಯಕ್ರಮ (more…)