ಗಾಳಿ-ಮಳೆಗೆ ಫರಂಗಿಪೇಟೆ ಸಮೀಪದ ಕೊಡ್ಮಾಣ್ ಗ್ರಾಮದ ಕೊಟ್ಟಿಂಜೆ ಎಂಬಲ್ಲಿ ಗುಡ್ಡವೊಂದು ಜರಿದು ಬಿದ್ದು, ಅಮ್ಮೆಮಾರ್-ಮಲ್ಲೂರು ರಸ್ತೆ ಸಂಪರ್ಕ ಕಡಿತ ಉಂಟಾಗಿ, ಜನಜೀವನ ಅಸ್ತವ್ಯಸ್ತಗೊಂಡಿತು. ಈ ಸಂದರ್ಭ ಅಲ್ಲಿ ಯಾರೂ ಇಲ್ಲದ ಕಾರಣ ಪ್ರಾಣಾಪಾಯಗಳು ಸಂಭವಿಸಲಿಲ್ಲ.
ಬುಧವಾರ ಸುರಿದ ಜಡಿಮಳೆಗೆ ಪೂರ್ತಿ ಮಣ್ಣು ಸಡಿಲಗೊಂಡು ಪಕ್ಕದ ರಸ್ತೆಗೆ ಕುಸಿದು ಬಿದ್ದಿದೆ. ಪರಿಣಾಮ ಗುಡ್ಡದ ಅಡಿಭಾಗದಲ್ಲಿ ನಿರ್ಮಾಣಗೊಂಡಿದ್ದ ಮೂರು ಶೆಡ್‌ಗಳು ನೆಲಸಮವಾಗಿದೆ. ಮಣ್ಣು ಶೆಡ್ಡಿನ ಮೇಲೆಯೇ ಬಿದ್ದು, ರಸ್ತೆಯನ್ನು ಕೂಡಾ ಆವರಿಸಿದ್ದು, ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಸುದ್ದಿ ತಿಳಿದ ಸ್ಥಳೀಯ ಪಂಚಾಯತ್ ಜೆಸಿಬಿ ಮೂಲಕ ಮಣ್ಣನ್ನು ತೆರವುಗೊಳಿಸಿ, ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
| ಪುತ್ತೂರಿನ ಸ್ವಾಗತ ಸಮಿತಿಯ ಸಂಚಾಲಕರಾಗಿ ಉಜ್ವಲ್ ಪ್ರಭು | ಹೊರಕಾಣಿಕೆ ಸಮಿತಿಯ ಸಂಚಾಲಕರಾಗಿ ದಯಾನಂದ ಶೆಟ್ಟಿ ಉಜಿರೆಮಾರು ಆಯ್ಕೆ…
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…