ಬಂಟ್ವಾಳ ನ್ಯಾಯಾಲಯಕ್ಕೆ ದ.ಕ. ಜಿಲ್ಲಾ ಪ್ರಧಾನ ನ್ಯಾಯಾಧೀಶ ಕೆ.ಎಸ್. ಬೀಳಗಿಯವರು ಭೇಟಿ ನೀಡಿ ನ್ಯಾಯಾಲಯದ ಪರಿವೀಕ್ಷಣೆ ಮಾಡಿದರು. ಬಂಟ್ವಾಳ ವಕೀಲರ ಸಂಘಕ್ಕೆ ಭೇಟಿ ನೀಡಿದಾಗ ಬಂಟ್ವಾಳ ಸಿವಿಲ್ ನ್ಯಾಯಾಧೀಶರ ನೇಮಕಕ್ಕೆ ಕ್ರಮ ವಹಿಸುವಂತೆ ಮನವಿ ಸಲ್ಲಿಸಲಾಯಿತು.
ವಕೀಲರ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಜೈನ್, ಉಪಾಧ್ಯಕ್ಷ ಪುಂಚಮೆ ಚಂದ್ರಶೇಖರ ರಾವ್, ಜೊತೆ ಕಾರ್ಯದರ್ಶಿ ವಿನೋದ, ಖಜಾಂಚಿ ಚಂದ್ರಶೇಖರ್ ಬೈರಿಕಟ್ಟೆ, ನ್ಯಾಯವಾದಿಗಳಾದ ಅಶ್ವನಿ ಕುಮಾರ್ ರೈ, ರಮೇಶ್ ಉಪಾಧ್ಯಾಯ, ಬಿವಿ.ಶೆಣೈ, ಶ್ರೀಧರ ಪೈ, ಗಣೇಶಾನಂದ ಸೋಮಯಾಜಿ, ಸುರೇಶ್ ಕುಮಾರ್ ನಾವೂರು, ಸತೀಶ್ ಬಿ., ಮತ್ತಿತರರು ಹಾಜರಿದ್ದರು. ಬಳಿಕ ಪರ್ಲಿಯಾ ನರ್ಸಿಂಗ್ ಹೋಂ ಬಳಿ ನ್ಯಾಯಧೀಶರ ವಸತಿ ನಿಲಯದ ಕಾಮಗಾರಿಯನ್ನು ಜಿಲ್ಲಾ ನ್ಯಾಯಾಧೀಶರು ವೀಕ್ಷಿಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…