ಭಗವಾನ್ ಶ್ರೀ ಕೋದಂಡರಾಮ ಭಜನಾ ಮಂದಿರ ಏರಮಲೆ ಸಮುದಾಯ ಭವನದಲ್ಲಿ ಜೂ. 21ರಂದು ವಿಶ್ವ ಯೋಗ ದಿನಾಚರಣೆ ಅಂಗವಾಗಿ ಶ್ರೀ ಯೋಗನಿಽ ಪತಂಜಲಿ ಪ್ರತಿಷ್ಠಾನ ನರಿಕೊಂಬು ಆಶ್ರಯದಲ್ಲಿ ಸಾಮೂಹಿಕ ಯೋಗ ಪ್ರದರ್ಶನ ನಡೆಯಿತು.
ನರಿಕೊಂಬು ಗ್ರಾ.ಪಂ. ಅಧ್ಯಕ್ಷ ಯಶೋಧರ ಕರ್ಬೆಟ್ಟು ಉಪಸ್ಥಿತಿಯಲ್ಲಿ ಸಾಮೂಹಿಕ ಯೋಗ ಪ್ರದರ್ಶನ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಭಜನಾ ಮಂದಿರ, ದೇವಸ್ಥಾನಗಳು ಇಂತಹ ಯೋಗ ಶಿಬಿರಗಳಿಗೆ ಸೂಕ್ತವಾಗಿ ಸ್ಪಂದಿಸುತ್ತಿರುವುದು ಅಭಿನಂದನೀಯ ಎಂದರು. ಯೋಗವನ್ನು ವಿಶ್ವವ್ಯಾಪಿ ಮಾಡುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಶ್ರಮ ಸಾಧನೆ ಪ್ರಯತ್ನಗಳಿಂದ ನಮ್ಮದೇ ಒಂದು ಜ್ಞಾನ ಸಂಪತ್ತನ್ನು ಮತ್ತೊಮ್ಮೆ ನಾವೇ ಮನವರಿಕೆ ಮಾಡಿಕೊಳ್ಳುವಂತಾಗಿದೆ ಎಂದರು. ಸಂಪನ್ಮೂಲ ವ್ಯಕ್ತಿ ಶಿಕ್ಷಕ ಸದಾಶಿವ ನಾಯಕ್ ಪ್ರಧಾನ ಉಪನ್ಯಾಸ ನೀಡಿ ಯೋಗದ ಬಗ್ಗೆ ಸಮಗ್ರ ವಿವರ ನೀಡಿದರು.
ತಾ.ಪಂ. ಸದಸ್ಯೆ ಗಾಯತ್ರಿ ರವೀಂದ್ರ ಸಪಲ್ಯ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿ ಯೋಗ ಶಿಕ್ಷಕ ಡಾ. ರಘುವೀರ ಅವಧಾನಿ, ಹಿರಿಯ ಪತ್ರಕರ್ತರಾದ ರಾಜಾ ಬಂಟ್ವಾಳ, ಹರೀಶ್ ಮಾಂಬಾಡಿ, ಗ್ರಾ.ಪಂ. ಸದಸ್ಯರಾದ ಕಿಶೋರ್ ಶೆಟ್ಟಿ ಬೋಳಂತೂರು, ತ್ರಿವೇಣಿ ಮೋನಪ್ಪ ಪೂಜಾರಿ, ಮಾಧವ ಕರ್ಬೆಟ್ಟು ಉಪಸ್ಥಿತರಿದ್ದರು.
ಮಂಗಳೂರಿನ ಶರಣ್ಯ ಮತ್ತು ಶಾರದಾ ವಿದ್ಯಾರ್ಥಿಗಳಿಂದ ಯೋಗ ಮತ್ತು ಯೋಗ ನೃತ್ಯಗಳ ಪ್ರದರ್ಶನ ನಡೆಯಿತು. ಸುಮಾರು 70 ಮಂದಿ ಶಿಬಿರ ವಿದ್ಯಾರ್ಥಿಗಳಿಂದ ಸಾಮೂಹಿಕ ಯೋಗ ಅಭ್ಯಾಸ ಹಮ್ಮಿಕೊಳ್ಳಲಾಗಿತ್ತು. ಪ್ರಜಿತ್, ಪ್ರೇಮನಾಥ ಶೆಟ್ಟಿ ಅಂತರ ಉಪಸ್ಥಿತರಿದ್ದರು. ಯೋಗ ಸಂಘಟಕ ನರಿಕೊಂಬು ಮೊಗರ್ನಾಡುವಿನ ವೈದ್ಯ ಡಾ| ಸುಬ್ರಹ್ಮಣ್ಯ ಭಟ್ ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕ ದಾಮೋದರ್ ಸ್ವಾಗತಿಸಿದರು. ಮನೋಜ್ ಕೇದಿಗೆ ವಂದಿಸಿದರು. ಪ್ರಕಾಶ ಪುತ್ರೋಟಿಬೈಲು ಕಾರ್ಯಕ್ರಮ ನಿರ್ವಹಿಸಿದರು.