ದೇಹ ಮನಸ್ಸುಗಳ ಸಮತೋಲನ ಕಾಯ್ದುಕೊಳ್ಳುವಲ್ಲಿ ನಿರಂತರ ಯೋಗಾಭ್ಯಾಸ ನಿರತರಾಗುವುದು ಬಹಳ ಮುಖ್ಯ ಎಂದು ಡಾ. ಸ್ವರ್ಣಕಲಾ ಅವರು ಹೇಳಿದರು.
ಬಂಟ್ವಾಳ ಜೋಡುಮಾರ್ಗದ ಸರಿದಂತರ ಪ್ರಕಾಶನದ ಆಶ್ರಯದಲ್ಲಿ ನಡೆದ ವಿಶ್ವ ಯೋಗ ದಿನದ ಅಂಗವಾಗಿ ಹತ್ತು ದಿನಗಳ ಯೋಗ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಪ್ರಕಾಶನದ ಪ್ರೊ. ರಾಜಮಣಿ ರಾಮಕುಂಜ ಅವರು ಶಿಬಿರವನ್ನು ನಡೆಸಿಕೊಟ್ಟರು. ಧಾತ್ರಿ ರಾಮಕುಂಜ ಕಾರ್ಯಕ್ರಮ ನಿರೂಪಿಸಿದರು. ಶಿಬಿರಾರ್ಥಿಗಳಿಂದ ಯೋಗ ಪ್ರದರ್ಶನವನ್ನು ಈ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಯಿತು. ಡಾ.ರಮ್ಯಾ ಬನ್ನಿಂತಾಯ ಅವರು ವಂದಿಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…