ನರಿಕೊಂಬು ಗ್ರಾಮದ ಬೋಳಂತೂರು ಏರಮಲೆಯ ಭಗವಾನ್ ಶ್ರೀ ಕೋದಂಡರಾಮ ಭಜನಾ ಮಂದಿರ ಮತ್ತು ಶ್ರೀ ಯೋಗನಿಧಿ ಪತಂಜಲಿ ಪ್ರತಿಷ್ಠಾನ ಆಶ್ರಯದಲ್ಲಿ ವಿಶ್ವ ಯೋಗ ದಿನ ಆಚರಣೆ ಜೂನ್ 21ರಂದು ಬೆಳಗ್ಗೆ 5.15 ಕ್ಕೆ ಏರಮಲೆಯ ಸಮದಾಯ ಭವನದಲ್ಲಿ ನಡೆಯಲಿದೆ.
ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವ ಸಮಾರಂಭವನ್ನು ತಾಪಂ ಸದಸ್ಯೆ ಗಾಯತ್ರಿ ರವೀಂದ್ರ ಸಫಲ್ಯ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷ ಯಶೋಧರ ಕರ್ಬೆಟ್ಟು ವಹಿಸುವರು. ಯೋಗ ಶಿಕ್ಷಕ ಸದಾಶಿವ ನಾಯಕ್ ಪ್ರಧಾನ ಉಪನ್ಯಾಸ ಮಾಡುವರು. ಯೋಗ ಶಿಕ್ಷಕ ಡಾ. ರಘುವೀರ ಅವಧಾನಿ, ಪತ್ರಕರ್ತರಾದ ರಾಜಾ ಬಂಟ್ವಾಳ, ಹರೀಶ ಮಾಂಬಾಡಿ, ಗ್ರಾಪಂ ಸದಸ್ಯರಾದ ಕಿಶೋರ್ ಕುಮಾರ್ ಶೆಟ್ಟಿ, ಮಾಧವ ಕರ್ಬೆಟ್ಟು, ರಾಜೀವಿ ಕೃಷ್ಣಪ್ಪ ಪೂಜಾರಿ, ತ್ರಿವೇಣಿ ಮೋನಪ್ಪ ಪೂಜಾರಿ ಉಪಸ್ಥಿತರಿರುವರು, 5.15 ರಿಂದ 5.45 ರವರೆಗೆ ನಿತ್ಯ ಯೋಗಾಭ್ಯಾಸಿಗಳಿಂದ ಸಾಮೂಹಿಕ ಯೋಗಾಭ್ಯಾಸ, 5.45 ರಿಂದ 6 ರವರೆಗೆ ಯೋಗಾಸನ ಪ್ರದರ್ಶನ ಬಳಿಕ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…