ಪಾಣೆಮಂಗಳೂರಿನಲ್ಲಿ 2017ರಲ್ಲಿ ಅತ್ಯಂತ ವೈಭವದ ಚಾತುರ್ಮಾಸ ಆಚರಿಸಿದ ಪರಮ ಪೂಜ್ಯ 108 ಮುನಿಶ್ರೀ ವೀರ ಸಾಗರ ಮಹಾರಾಜರ ಪಾವನ ಸಾನ್ನಿಧ್ಯದಲ್ಲಿ ಪಾಣೆಮಂಗಳೂರು ಶ್ರೀ ಅನಂತನಾಥ ತೀರ್ಥಂಕರ ಜಿನ ಚೈತ್ಯಾಲಯದಲ್ಲಿ 65 ಭವ್ಯ ಶ್ರಾವಕರು ಮತ್ತು ವಿದ್ಯಾರ್ಥಿಗಳ ಪಾಲುಗೊಳ್ಳುವಿಕೆಯಲ್ಲಿ ‘ಶ್ರೀ ಶ್ರುತ ಸ್ಕಂದ ಆರಾಧನೆ’ ಸಂಪನ್ನವಾಯಿತು.
ಪರಮ ಪೂಜ್ಯ 108 ಮುನಿಶ್ರೀ ವೀರ ಸಾಗರ ಮಹಾರಾಜರ ನೇತೃತ್ವದಲ್ಲಿ ಸಮಾಜದ ಸಮಸ್ತ ಶ್ರಾವಕ ಬಂಧುಗಳ ಪಾಲುಗೊಳ್ಳುವಿಕೆಯಲ್ಲಿ ಜಿನ ಬಿಂಬ, ಶುೃತ ಮತ್ತು ಆಗಮ ಶಾಸ್ತ್ರಗಳನ್ನು ಪೂಜಿಸಿ ಮೆರವಣಿಗೆಯಲ್ಲಿ ತಂದು, ಪೂಜ್ಯ ಮುನಿಶ್ರೀಗಳು ಸೂಕ್ತ ವಿಧಿ ವಿಧಾನಗಳ ಮೂಲಕ ಆರಾಧನೆಯನ್ನು ನಡೆಸಲಾಯಿತು. ಧರಣೇಂದ್ರ ಇಂದ್ರ ಪಾಣೆಮಂಗಳೂರು ಸೇವಾಕರ್ತೃಗಳಾಗಿದ್ದರು.
ಪರಮ ಪೂಜ್ಯ 108 ಮುನಿಶ್ರೀ ವೀರ ಸಾಗರ ಮಹಾರಾಜರು ತಮ್ಮ ಮಂಗಲ ಪ್ರವಚನದಲ್ಲಿ ಧರ್ಮ, ಆಚರಣೆ ಮತ್ತು ಶುೃತ ಸ್ಕಂಧ ಆರಾಧನೆಯ ಮಹತ್ವವನ್ನು ವಿವರಿಸಿದರು. 2018 ರ ಚಾತುರ್ಮಾಸ ಆಚರಿಸಲು ಸುಮಾರು 10 ಪರಮ ಪೂಜ್ಯ 108 ಮುನಿಶ್ರೀ ವೀರ ಸಾಗರ ಮಹಾರಾಜರ ತಮ್ಮ 2018 ರ ಭವ್ಯ ಮಂಗಲ ಪಾವನ ವರ್ಷಾಯೋಗವನ್ನು ಧರ್ಮ ನಗರ, ಕಾರ್ಕಳ ಶ್ರೀ ಬಾಹುಬಲಿ ಕ್ಷೇತ್ರದಲ್ಲಿ ನಡೆಸಲು ಸಮ್ಮತಿ ಸೂಚಿಸಿದರು.
ಧರ್ಮಸಭೆಯಲ್ಲಿ ಸಮಾಜದ ಪ್ರಮುಖರಾದ ಸಂಪತ್ ಕುಮಾರ್ ಶೆಟ್ಟಿ, ರತ್ನಾಕರ್ ಜೈನ್ ಮಂಗಳೂರು, ಸುದರ್ಶನ್ ಜೈನ್, ಧರಣೇಂದ್ರ ಇಂದ್ರ, ಭುವನೇಂದ್ರ ಇಂದ್ರ, ಪ್ರವೀಣ್ ಕುಮಾರ್,ಹರ್ಷರಾಜ್ ಬಲ್ಲಾಳ್, ಆದಿರಾಜ್ ಜೈನ್ ಉಪಸ್ಥಿತರಿದ್ದರು. ದೀಪಕ್ ಕುಮಾರ್ ಇಂದ್ರ ಕಾರ್ಯಕ್ರಮ ನಿರೂಪಿಸಿದರು.