ಜಿಲ್ಲಾ ಸುದ್ದಿ

ಎಂಫ್ರೆಂಡ್ಸ್ ಸೇವೆ ಎಲ್ಲರಿಗೂ ಮಾದರಿ: ಸೆಂಥಿಲ್

ಎಂಫ್ರೆಂಡ್ಸ್ ಮಂಗಳೂರು ವತಿಯಿಂದ ಜಿ ಸರಕಾರಿ ವೆನ್ಲಾಕ್ ಆಸ್ಪತ್ರೆಯ ಸಿಬ್ಬಂದಿಗಳ ಜತೆ ಈದ್ ಸೌಹಾರ್ದ ಕಾರ್ಯಕ್ರಮ ‘ಈದ್ ಜಲ್ಸಾ’ ನಗರದ ಐಎಂಎ ಹಾಲ್‌ನಲ್ಲಿ ಭಾನುವಾರ ನಡೆಯಿತು.

ಮುಖ್ಯ ಅತಿಥಿ ಜಿಲ್ಲಾಕಾರಿ ಸಸಿಕಾಂತ್ ಸೆಂಥಿಲ್ ಮಾತನಾಡಿ, ಇಸ್ರೇಲ್ ದೇಶದಲ್ಲಿ ಪ್ರತಿಯೊಬ್ಬ ಸ್ತ್ರೀ ಪುರುಷರಿಗೆ ಒಂದು ವರ್ಷ ಮಿಲಿಟರಿ ಸೇವೆ ಕಡ್ಡಾಯವಿದೆ. ನಮ್ಮಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ ಒಂದು ವರ್ಷ ಸೇವೆ ಕಡ್ಡಾಯ ಮಾಡಿದರೆ ಜನರ ಕಷ್ಟ ಅರ್ಥವಾಗಲಿದೆ. ಬಡವರ ಕಷ್ಟಗಳನ್ನು ಅರ್ಥ ಮಾಡಿಕೊಂಡು ವೈದ್ಯಕೀಯ ನೆರವು, ರಾತ್ರಿ ಊಟ ನೀಡುತ್ತಿರುವ ಎಂಫ್ರೆಂಡ್ಸ್ ಸೇವೆ ಎಲ್ಲರಿಗೂ ಮಾದರಿ ಎಂದರು.

ಸರಕಾರಿ ವೆನ್ಲಾಕ್ ಆಸ್ಪತ್ರೆ ಅಕ್ಷಕಿ ಡಾ.ರಾಜೇಶ್ವರಿದೇವಿ  ಎಚ್.ಆರ್. ಮಾತನಾಡಿ, ತಾನು ವೆನ್ಲಾಕ್ ಅಕ್ಷಕಿಯಾಗಿ ಬಂದಂದಿನಿಂದ ಬಡ ರೋಗಿಗಳ ಚಿಕಿತ್ಸೆ ಮತ್ತು ದೂರದ ಊರುಗಳಿಗೆ ಮೃತದೇಹಗಳ ಸಾಗಾಟಕ್ಕೆ ನೆರವು, ರೋಗಿಗಳ ಜತೆ ಇರುವವರಿಗೆ ರಾತ್ರಿ ಊಟ ನೀಡುತ್ತಿರುವ ಎಂಫ್ರೆಂಡ್ಸ್‌ನ ಸೇವೆ ಶ್ಲಾಘನೀಯ. ಈದುಲ್ ಫಿತ್ರ್ ಸಂಭ್ರಮವನ್ನು ವೆನ್ಲಾಕ್ ಆಸ್ಪತ್ರೆ ಸಿಬ್ಬಂದಿ ಜತೆ ಆಚರಿಸುವುದು ಹೆಮ್ಮೆಯ ವಿಚಾರ ಎಂದರು.

ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ ಹಬ್ಬದ ಸಂದೇಶ ನೀಡಿ, ರಮ್ಝಾನ್ ತಿಂಗಳಲ್ಲಿ ಅನ್ನಾಹಾರ ಬಿಟ್ಟು, ದಾನ ಧರ್ಮಗಳನ್ನು ಮಾಡಿ, ಸ್ವಯಂ ನಿಯಂತ್ರಣ ಸಾಸಿದ್ದ ಮುಸ್ಲಿಮರು, ಈದುಲ್ ಫಿತ್ರ್ ಆಚರಿಸಿದ್ದಾರೆ. ಏಕದೇವನ ಗುಣಗಾನ, ಪರಸ್ಪರ ಏಕತೆ, ಪ್ರೀತಿ, ವಿಶ್ವಾಸ, ಸಹನೆ, ನೆರವು ಹಬ್ಬದ ಸಾರ. ಅದನ್ನು ಜೀವನದಲ್ಲಿ ಅಳವಡಿಸಿದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.

ಎಂಫ್ರೆಂಡ್ಸ್ ಅಧ್ಯಕ್ಷ ಮೊಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ಅಧ್ಯಕ್ಷತೆ ವಹಿಸಿ, ವೆನ್ಲಾಕ್ ರೋಗಿಗಳ ಜತೆ ಇರುವವರಿಗೆ ಊಟ ನೀಡುವ ಮಹತ್ವಾಕಾಂಕ್ಷಿಯ ಕಾರುಣ್ಯ ಯೋಜನೆ ಮುಂದುವರಿಸಲು ಸರ್ವರ ಸಹಕಾರ ಅಗತ್ಯ ಎಂದರು.

ಇದೇ ಸಂದರ್ಭದಲ್ಲಿ ಕಾರುಣ್ಯ ಯೋಜನೆಗೆ ನೆರವು ನೀಡಿರುವ ದಾನಿಗಳಾದ ಬರಕ ಇಂಟರ್‌ನ್ಯಾಷನಲ್ ಸ್ಕೂಲ್ ಸ್ಥಾಪಕ ಅಶ್ರಫ್, ಮೊಹಮ್ಮದ್ ಮುಹ್ಸಿನ್, ಹನೀಫ್ ಇಬ್ರಾಹಿಂ ಕೊಯಮತ್ತೂರು, ಬಿ.ಕೆ.ಫಹದ್ ಹಾಗೂ ಪ್ರತಿದಿನದ ಊಟ ತಯಾರಿಸಿ ಕೊಡುವ ಸೌಹಾನ್ ಅವರನ್ನು ಗೌರವಿಸಲಾಯಿತು.

ಹಾಫಿಝ್ ಶಾಮಿಲ್ ಅಬ್ದುಲ್ ಖಾದರ್ ಗೋಳ್ತಮಜಲು ಕುರ್‌ಆನ್ ಪಠಿಸಿದರು. ಎಂಫ್ರೆಂಡ್ಸ್ ಗ್ರೂಪ್ ಎಡ್ಮಿನ್ ರಶೀದ್ ವಿಟ್ಲ ಸ್ವಾಗತಿಸಿದರು. ಸದಸ್ಯ ಅಹ್ಮದ್ ಮುಸ್ತಫಾ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು. ಕೋಶಾಕಾರಿ ಅಬೂಬಕರ್ ನೋಟರಿ ವಂದಿಸಿದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts