ವಿಟ್ಲ ಭಾಗದಲ್ಲಿ ಶುಕ್ರವಾರ ಸಡಗರದಲ್ಲಿ ಮುಸ್ಲಿಂ ಬಾಂಧವರು ಈದುಲ್ ಫಿತರ್ ಆಚರಿಸಿದರು.
ವಿಟ್ಲ ಕೇಂದ್ರ ಜುಮಾ ಮಸೀದಿಯಲ್ಲಿ ಖತೀಬು ಅಬ್ದುಲ್ ಸಲಾಂ ಲತೀಫಿ ಅವರು ವಿಶೇಷ ಪ್ರಾರ್ಥನೆ ಸಲ್ಲಿಸಿ ಸಂದೇಶ ನೀಡಿ ಮಾತನಾಡಿ ಹಬ್ಬಗಳ ಆಚರಣೆಗಳು ಇನ್ನೊಬ್ಬರಿಗೆ ತೊಂದರೆ ನೀಡುವುದಲ್ಲ. ಇಸ್ಲಾಂ ನಿಷೇಧ ಮಾಡಿದ ಕಾರ್ಯಗಳನ್ನು ಮಾಡುವುದಲ್ಲ. ಅನಾಚಾರ ವಿಷಯಗಳಿಗೆ ಹೋಗುವುದಲ್ಲ ಪ್ರತಿಯೊಬ್ಬರು ಐಕ್ಯತೆಯಿಂದ ಬದುಕುವುದಾಗಿದೆ ಎಂದು ಹೇಳಿದರು. ಲೋಕದಲ್ಲಿ ಎಲ್ಲಿಯಾದರೂ ಒಬ್ಬರಿಗೆ ಸಮಸ್ಯೆಯಾದರೆ ಅದು ನಮ್ಮ ಸಮಸ್ಯೆ ಎಂದು ಭಾವಿಸಿ ಅವರಿಗೆ ಸಹಾಯಹಸ್ತ ನೀಡಬೇಕು. ಇದರಿಂದ ನೈಜ ಮುಸಲ್ಮಾನನಾಗಿ ಜೀವಿಸಲು ಸಾಧ್ಯ. ಪ್ರತಿಯೊಬ್ಬರ ದುಃಖದಲ್ಲಿ ಭಾಗಿಯಾಗುವುದು ಪ್ರತಿಯೊಬ್ಬನ ಕರ್ತವ್ಯವಾಗಿದೆ ಎಂದು ಹೇಳಿದರು.
ವಿಟ್ಲ ಸಮೀಪದ ಕೆಲಿಂಜ ಮುಹಿಯ್ಯದ್ದೀನ್ ಜುಮ್ಮಾ ಮಸೀದಿಯಲ್ಲಿ ಎಸ್.ಎಮ್, ಅಬ್ಬಾಸ್ ದಾರಿಮಿ ಕೆಲಿಂಜ ಅವರು ಈದ್ ನಮಾಜ್ಗೆ ನೇತೃತ್ವ ವಹಿಸಿದ್ದರು. ವಿಶೇಷ ಪ್ರಾರ್ಥನೆಯ ಮೊದಲು ಈದ್ ಸಂದೇಶ ನೀಡಿ ಈದ್ಉಲ್ ಫಿತರ್ ಹಬ್ಬವು ಶಾಂತಿ ಸಮದಾನ ಸಹೋದರತೆಯ ಸಂಕೇತವಾಗಿದೆ. ಪ್ರತಿಯೊಬ್ಬರೂ ದ್ವೇಷ ವೈರಾಗ್ಯವನ್ನು ಬಿಟ್ಟು ಶಾಂತಿಯಿಂದ ಬಾಳಿ ಮತ್ತು ಕುಟುಂಬ ಬಂಧವನ್ನು ಬಲಪಡಿಸಿ ಒಗ್ಗಾಟಾಗಿ ಬಾಳಿ ಅಲ್ಲಾಹುವಿನ ದಾಸರಾಗಿ ಎಂದು ಹೇಳಿದರು.
ಬಳಿಕ ಎಸ್ಕೆಎಸ್ಎಸ್ಎಫ್ ಕೆಲಿಂಜ ಶಾಖೆ ವತಿಯಿಂದ ಈದ್ ಮಿಲನ್ ಆಚರಿಸಿದರು. ಮಸೀದಿಯಲ್ಲಿ ಹಾಗೂ ವಾಹನದಲ್ಲಿ ಹೋಗುವ ಪ್ರತಿಯೊಬ್ಬರಿಗೆ ಸಿಹಿತಿಂಡಿ ವಿತರಿಸಿ ಈದ್ ಹಬ್ಬದ ಶುಭಾಶಯ ಕೋರಿದರು.