ಸೆಪ್ಟಂಬರ್‌ನಲ್ಲಿ ನಡೆಸಲುದ್ದೇಶಿಸಿರುವ ಬಂಟ್ವಾಳ ಪುರಸಭೆಯ ಚುನಾವಣೆಗೆ ಸಂಬಂಧಿಸಿದಂತೆ ಪುರಸಭೆಯ ವ್ಯಾಪಿಯನ್ನು ಮರುವಿಂಗಡಿಸಿ ವಾರ್ಡುವಾರು ಮೀಸಲಾತಿಯನ್ನು ಪ್ರಕಟಿಸಲಾಗಿದೆ. ಆದರೆ ಈ ಮೀಸಲಾತಿಯು ಸಂಪೂರ್ಣಗೊಂದಲವಾಗಿದ್ದು, ಅದನ್ನು ಸರಿಪಡಿಸುವಂತೆ ಒತ್ತಾಯಿಸಿ ಎಸ್‌ಡಿಪಿಐ ನಿಯೋಗವು ಗುರುವಾರ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿತು.
ಈಗಾಗಲೇ ಪ್ರಕಟಗೊಂಡ 27 ವಾರ್ಡ್ ಗಳಲ್ಲಿ 12 ಮಹಿಳಾ ಮೀಸಲಾತಿ ನೀಡಿದ್ದು, ಅದರಲ್ಲೂ ಮುಸ್ಲಿಮ್ ಪ್ರಾಬಲ್ಯವಿರುವ ವಾರ್ಡ್‌ಗಳ ೭ ವಾರ್ಡ್‌ಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಲಾಗಿದೆ. ಅಲ್ಲದೆ ಮುಸ್ಲಿಮರೇತರ ಮತದಾರರೇ ಇಲ್ಲದ ವಾರ್ಡ್ ಗಳಲ್ಲಿ ಮುಸ್ಲಿಮರೇತರರಿಗೆ ಮೀಸಲಿರಿಸಲಾಗಿರುವ ವಿಚಾರವನ್ನು ನಿಯೋಗವು ಜಿಲ್ಲಾಧಿಕಾರಿಯವರಿಗೆ ಮನವಿಯ ಮೂಲಕ ತಿಳಿಸಿದೆ.
ಪ್ರಸಕ್ತ ಗೊಂದಲಮಯ ಮೀಸಲಾತಿಯನ್ನು ರದ್ದುಪಡಿಸಿ ಜನಸಂಖ್ಯಾಧರಿತ ಮೀಸಲಾತಿ ಪ್ರಕಟಿಸಲು ಮನವಿ ಮೂಲಕ ಒತ್ತಾಯಿಸಲಾಗಿದೆ.
ಈ ನಿಯೋಗದಲ್ಲಿ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೊಕಟ್ಟೆ, ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ, ಜಿಲ್ಲಾಕೋಶಾಧಿಕಾರಿ ಇಕ್ಬಾಲ್ ಐಎಂಆರ್, ಕ್ಷೇತ್ರಾಧ್ಯಕ್ಷ ಶಾಹುಲ್ ಎಸ್.ಎಚ್., ಪುರಸಭಾ ಸಮಿತಿ ಅಧ್ಯಕ್ಷ ಮುನಿಶ್ ಅಲಿ, ಕಾರ್ಯದರ್ಶಿ ಸಿದ್ದೀಕ್ ನಂದರಬೆಟ್ಟು ಮೊದಲಾದವರು ಹಾಜರಿದ್ದರು.