www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಬಂಟ್ವಾಳ ಪುರಸಭಾ ವ್ಯಾಪ್ತಿಯ 27 ವಾರ್ಡ್‌ಗಳ ಮೀಸಲಾತಿ ಕರಡುಪಟ್ಟಿಯನ್ನು ಕರ್ನಾಟಕ ಪುರಸಭೆ ಕಾಯಿದೆ 1964 ಕಲಂ 13 ರನ್ವಯ ಹಾಗೂ ಸರಕಾರದ ಅಧಿಸೂಚನೆ 13/12 ರನ್ವಯ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಕೆ.ಎನ್.ಬಾಗಲವಾಡೆ ಪ್ರಕಟಿಸಿ ಆದೇಶಿಸಿದ್ದಾರೆ.
ಈ ಮೊದಲು ಬಂಟ್ವಾಳ ಪುರಭೆಯಲ್ಲಿ 23 ವಾರ್ಡ್‌ಗಳಿದ್ದು, ಜನಸಂಖ್ಯೆಯ ಆಧಾರದ ಮೇಲೆ 4 ವಾರ್ಡ್‌ಗಳನ್ನು ಹೆಚ್ಚಿಸಲಾಗಿದೆ. ಇದೀಗ ಬಂಟ್ವಾಳದಲ್ಲಿ ಒಟ್ಟು 27 ವಾರ್ಡುಗಳಿವೆ.
ವಾರ್ಡ್‌ವಾರು ಮೀಸಲಾತಿ (ಕರಡು ಪ್ರತಿ):
ಬಂಟ್ವಾಳ ಕಸ್ಬಾ:
ವಾರ್ಡ್ 1-ಹಿಂದುಳಿದ ವರ್ಗ(ಎ) ಮಹಿಳೆ
ವಾರ್ಡ್ 2-ಸಾಮಾನ್ಯ
ವಾರ್ಡ್ 3- ಹಿಂದುಳಿದ ವರ್ಗ(ಬಿ) ಮಹಿಳೆ
ವಾರ್ಡ್ 4-ಪರಿಶಿಷ್ಟ ಜಾತಿ
ವಾರ್ಡ್ 5-ಸಾಮಾನ್ಯ
ವಾರ್ಡ್ 6-ಹಿಂದುಳಿದ ವರ್ಗ(ಎ)
ವಾರ್ಡ್ 7-ಸಾಮಾನ್ಯ ಮಹಿಳೆ
ವಾರ್ಡ್ 8-ಹಿಂದುಳಿದ ವರ್ಗ(ಬಿ).
ಬಂಟ್ವಾಳ ಬಿಮೂಡ:
ವಾರ್ಡ್ 9-ಸಾಮಾನ್ಯ
ವಾರ್ಡ್ 10-ಹಿಂದುಳಿದ ವರ್ಗ(ಎ) ಮಹಿಳೆ,
ವಾರ್ಡ್ 11-ಸಾಮಾನ್ಯ
ವಾರ್ಡ್ 12-ಹಿಂದುಳಿದ ವರ್ಗ(ಎ),
ವಾರ್ಡ್ 13-ಹಿಂದುಳಿದ ವರ್ಗ(ಎ) ಮಹಿಳೆ
ವಾರ್ಡ್ 14-ಸಾಮಾನ್ಯ ಮಹಿಳೆ
ವಾರ್ಡ್ 15-ಸಾಮಾನ್ಯ
ವಾರ್ಡ್ 16-ಸಾಮಾನ್ಯ
ವಾರ್ಡ್ 17-ಹಿಂದುಳಿದ ವರ್ಗ(ಎ)
ವಾರ್ಡ್ 18-ಸಾಮಾನ್ಯ ಮಹಿಳೆ
ವಾರ್ಡ್ 19-ಹಿಂದುಳಿದ ವರ್ಗ(ಎ) ಮಹಿಳೆ
ವಾರ್ಡ್ 20-ಸಾಮಾನ್ಯ
ವಾರ್ಡ್ 21-ಸಾಮಾನ್ಯ ಮಹಿಳೆ
ವಾರ್ಡ್ 22-ಹಿಂದುಳಿದ ವರ್ಗ(ಎ).
ಪಾಣೆಮಂಗಳೂರು
ವಾರ್ಡ್ 23-ಸಾಮಾನ್ಯ ಮಹಿಳೆ
ವಾರ್ಡ್ 24-ಹಿಂದುಳಿದ ವರ್ಗ (ಎ)
ವಾರ್ಡ್ 25-ಸಾಮಾನ್ಯ ಮಹಿಳೆ
ವಾರ್ಡ್ 26-ಸಾಮಾನ್ಯ ಮಹಿಳೆ,
ವಾರ್ಡ್ 27-ಪರಿಶಿಷ್ಟ ಪಂಗಡ.
ಬಂಟ್ವಾಳ ಪುರಸಭಾ ವ್ಯಾಪ್ತಿಯ 27 ವಾರ್ಡ್‌ಗಳಲ್ಲಿ 12 ವಾರ್ಡ್‌ಗಳು ಮಹಿಳೆಯರಿಗಾಗಿ ಮೀಸಲಿಡಲಾಗಿದೆ.
ಕರಡು ಮೀಸಲಾತಿ ಪಟ್ಟಿಯನ್ನು ಸಾರ್ವಜನಿಕರ ಅವಗಾಹನೆಗಾಗಿ ಪ್ರಕಟಿಸಿದ್ದು ಈ ಅಧಿಸೂಚನೆಯನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ 7 ದಿನಗಳ ತರುವಾಯ ಪರಿಗಣನೆಗೆ ತೆಗೆದುಕೊಳ್ಳಲಾಗುವುದು. ಮೀಸಲಾತಿಗೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಣೆಯನ್ನು ಸಲ್ಲಿಸಲು ಇಚ್ಚಿಸುವ ವ್ಯಕ್ತಿಗಳು ಅದನ್ನು ಲಿಖಿತದಲ್ಲಿ ಕಾರಣ ಸಹಿತವಾಗಿ ದಾಖಲೆಗಳೊಂದಿಗೆ ನಿಗದಿತ ದಿನಾಂಕಕ್ಕಿಂತ ಮೊದಲು ಜಿಲ್ಲಾಧಿಕಾರಿಗೆ ಕಳುಹಿಸಬೇಕೆಂದು ತಿಳಿಸಿದ್ದಾರೆ.