ಶಂಭೂರಿನಲ್ಲಿರುವ ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆಯಲ್ಲಿ ಜೇಸಿ ಜೋಡುಮಾರ್ಗ ನೇತ್ರಾವತಿ ಮತ್ತು ರೋಟರಿ ಕ್ಲಬ್ ಬಂಟ್ವಾಳ ವತಿಯಿಂದ ಸ್ಯಾನಿಟರಿ ನ್ಯಾಪ್ಕಿನ್ ಬರ್ನಿಂಗ್ ಮೆಷಿನ್ ಅನ್ನು ಕೊಡುಗೆಯಾಗಿ ನೀಡಲಾಯಿತು.
ಈ ಸಂದರ್ಭ ಮಾತನಾಡಿದ ಜೇಸಿ ವಲಯ 15ರ ಅಧ್ಯಕ್ಷ ರಾಕೇಶ್ ಕುಂಜೂರು, ವಿಧ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ಯಲ್ಲಿ ಶಾಲೆ ಮಹತ್ವದ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ಜೇಸೀ ಸಂಸ್ಥೆ ಶಾಲಾ ಮಕ್ಕಳಿಗೆ ವ್ಯಕ್ತಿತ್ವ ವಿಕಸನ ತರಬೇತಿ ಹಾಗೂ ವಿದ್ಯಾರ್ಥಿಗಳಿಗೆ ವೈಯಕ್ತಿಕ ಶುಚಿತ್ವ ಕಾಪಾಡಲು ಬೇಕಾದ ಸಲಕರಣೆಗಳನ್ನು ಶಾಶ್ವತ ಯೋಜನೆ ಮೂಲಕ ಅನುಷ್ಠಾನ ಮಾಡುತ್ತಿದೆ ಎಂದರು.
ಜೇಸಿರೆಟ್ ವಿಭಾಗದ ಅಧ್ಯಕ್ಷೆ ಗಾಯತ್ರಿ ಲೋಕೇಶ್, ಶಾಲಾ ಮುಖ್ಯ ಶಿಕ್ಷಕರಾದ ಕಮಲಾಕ್ಷ ಕಲ್ಲಡ್ಕ, ಜೇಸೀ ವಲಯದ ಪೂರ್ವಾಧ್ಯಕ್ಷರಾದ ಸಂದೀಪ್ ಕುಮಾರ್, ರೋಟರಿ ಕ್ಲಬ್ ಬಂಟ್ವಾಳ ಟೌನ್ ನಿಯೋಜಿತ ಅಧ್ಯಕ್ಷ ರಾದ ಉಮೇಶ್ ನಿರ್ಮಲ್, ಯುವ ಜೇಸಿ ವಿಭಾಗದ ಅಧ್ಯಕ್ಷೆ ದಿವ್ಯಾ, ಇಂಟರಾಕ್ಟ್ ಕ್ಲಬ್ ನ ಅಧ್ಯಕ್ಷ ರಾದ ದರ್ಶಿತ್ ಉಪಸ್ತಿತರಿದ್ದರು. ಅಧ್ಯಕ್ಷತೆ ಜೇಸೀ ಐ ಜೋಡುಮಾರ್ಗ ನೇತ್ರಾವತಿ ಅಧ್ಯಕ್ಷರಾದ ಸವಿತಾ ನಿರ್ಮಲ್ ವಹಿಸಿದ್ದರು. ಉಮೇಶ್ ನಿರ್ಮಲ್ ಯೋಜನೆಯ ಬಗ್ಗೆ ಪ್ರಸ್ತಾವನೆ ನೀಡಿದರು. ರಚನಾ ಸ್ವಾಗತಿಸಿದರು. ಪವನ್ ರಾಜ್ ವಂದನಾರ್ಪಣೆ ಸಲ್ಲಿಸಿದರು. ಪಾವನ ಕಾರ್ಯಕ್ರಮ ನಿರೂಪಿಸಿದರು.