ಫ್ಯಾನ್ ಸ್ವಿಚ್ ಹಾಕಿದ ಸಂದರ್ಭ ಶಾರ್ಟ್ ಸರ್ಕ್ಯೂಟ್ ನಿಂದ ವಿದ್ಯುತ್ ಪ್ರವಹಿಸಿ ಕಾರ್ಮಿಕನೋರ್ವ ಸಾವನ್ನಪ್ಪಿದ್ದಾರೆ. ಪಾಣೆಮಂಗಳೂರು ಗ್ರಾಮದ ಅಕ್ಕರಂಗಡಿ ಎಂಬಲ್ಲಿರುವ ಹಳೇ ಸುಣ್ಣದ ಗೂಡಿನ ಕಟ್ಟಡದಲ್ಲಿ ಭಾನುವಾರ ಮುಂಜಾನೆ ಘಟನೆ ನಡೆದಿದೆ. ರಾಯಚೂರು ಜಿಲ್ಲೆಯ ಚಿನ್ನೂರು ತಾಲೂಕು ಗುಂಡ ಗ್ರಾಮದ ಬೊಮ್ಮನ ಹಳ್ಳಿ ನಿವಾಸಿ ಗ್ಯಾನಪ್ಪ (25) ಸಾವನ್ನಪ್ಪಿದವರು.
ಗ್ಯಾನಪ್ಪ ಅವರಿಗೆ ಹೆಂಡತಿ ಲಕ್ಷ್ಮಮ್ಮ ಹಾಗೂ 9 ತಿಂಗಳಿನ ಓರ್ವ ಪುತ್ರಿ ಇದ್ದಾರೆ. ಮೃತದೇಹವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಬಂಟ್ವಾಳ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಘಟನಾ ಸ್ಥಳಕ್ಕೆ ಪಾಣೆಮಂಗಳೂರು ಹೋಬಳಿ ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ ಸೂಚನೆಯಂತೆ ಪಾಣೆಮಂಗಳೂರು ಗ್ರಾಮ ಲೆಕ್ಕಾಧಿಕಾರಿ ವಿಜೇತ, ತಾಲೂಕು ಕಚೇರಿ ಸಿಬ್ಬಂದಿಗಳಾದ ಸದಾಶಿವ ಕೈಕಂಬ, ಶೀತಲ್, ಚಂದ್ರಶೇಖರ್, ಯಶೋಧ ಭೇಟಿ ನೀಡಿದ್ದು, ಮಹಜರು ನಡೆಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…