ಎಸ್‌ಡಿಪಿಐ ಬಂಟ್ವಾಳ ಪುರಸಭಾ ಸಮಿತಿಯ ಆಂತರಿಕ ಚುನಾವಣೆಯು ಗೂಡಿನಬಳಿಯ ಸಮುದಾಯ ಭವನದಲ್ಲಿ ಸಮಿತಿಯ ಅಧ್ಯಕ್ಷ ಯೂಸುಫ್ ಆಲಡ್ಕ ಅವರ ಅಧ್ಯಕ್ಷತೆ ಶುಕ್ರವಾರ ನಡೆಯಿತು.
ಇದೇ ಸಂದರ್ಭ ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆ ನಡೆಯಿತು. ಪುರಸಭಾ ಸಮಿತಿಯ ನೂತನ ಅಧ್ಯಕ್ಷರಾಗಿ ಮುನೀಶ್ ಅಲಿ, ಉಪಾಧ್ಯಕ್ಷರಾಗಿ ಅಕ್ಬರ್ ಅಲಿ, ಕಾರ್ಯದರ್ಶಿಯಾಗಿ ಸಿದ್ದಿಕ್ ನಂದರಬೆಟ್ಟು, ಜೊತೆ ಕಾರ್ಯದರ್ಶಿಯಾಗಿ ಅನ್ವರ್ ಆಲಡ್ಕ, ಕೋಶಾಧಿಕಾರಿಯಾಗಿ ಇಕ್ಬಾಲ್ ಮೈನ್ಸ್ ಅವರನ್ನು ಆಯ್ಕೆ ಮಾಡಲಾಯಿತು.
ನಿಕಟ ಪೂರ್ವ ಅಧ್ಯಕ್ಷರಾಗಿದ್ದ ಯೂಸುಫ್ ಆಲಡ್ಕ ಅವರಿಂದ ಅಧಿಕಾರ ವಹಿಸಿಕೊಂಡ ಮುನೀಶ್ ಅಲಿ ಮಾತನಾಡಿ, ಪ್ರಸಕ್ತ ರಾಜಕೀಯ ಸನ್ನಿವೇಶಗಳನ್ನು ಗಮನಿಸಿದಾಗ ಮತ್ತು ಪುರಸಭಾ ವ್ಯಾಪ್ತಿಯಲ್ಲಿ ಪಕ್ಷದ ಬಲ ಹಾಗೂ ಸಾಮರ್ಥ್ಯ ಅವಲೋಕಿಸಿದಾಗ ಮುಂದಿನ ಅವಧಿಯಲ್ಲಿ ಪುರಸಭೆ ಅಧಿಕಾರ ಎಸ್‌ಡಿಪಿಐ ತೆಕ್ಕೆಗೆ ಬೀಳಲಿದೆ ಎಂದು ಹೇಳಿದರು.
ರಾಜ್ಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಪಕ್ಷವು ಕಳೆದ ಪುರಸಭಾ ಚುನಾವಣೆಯಲ್ಲಿ ಮೂರು ಸ್ಥಾನಗಳನ್ನು ಪಡೆದಿತ್ತು. ಅದೇ ರೀತಿ ಈ ಬಾರಿ ಕೂಡ ಕ್ಷೇತ್ರದ ಎಲ್ಲ ೨೭ ವಾರ್ಡ್‌ಗಳಲ್ಲಿ ಗುರಿ ಇಟ್ಟು ಕೆಲಸ ಮಾಡಿದರೆ, ನಾವು ನಿರ್ಣಾಯಕ ಪಾತ್ರದಾರಿಗಳಾಗಿ ಹೊರಹೊಮ್ಮಲಿದ್ದೇವೆ. ಈ ನಿಟ್ಟಿನಲ್ಲಿ ಎಲ್ಲ ಕಾರ್ಯಕರ್ತರು ಮುಂದಿನ ಮೂರು ತಿಂಗಳು ಅವಿರತವಾಗಿ ಶ್ರಮಿಸಬೇಕು ಎಂದು ಹೇಳಿದರು.
ಚುನಾವಣಾ ಅಧಿಕಾರಿಯಾಗಿ ಸತ್ತಾರ್ ಕಲ್ಲಡ್ಕ ಹಾಗೂ ರಿಟರ್ನಿಂಗ್ ಆಫೀಸರ್ ಆಗಿ ಖಲಂದರ್ ಪರ್ತಿಪ್ಪಾಡಿ ಭಾಗವಹಿಸಿದ್ದರು. ಈ ಸಂಧರ್ಭದಲ್ಲಿ ಕ್ಷೇತ್ರ ಅಧ್ಯಕ್ಷ ಶಾಹುಲ್ ಹಮೀದ್, ಕಾರ್ಯದರ್ಶಿ ಇಸ್ಮಾಯಿಲ್ ಬಾವ, ಪುರಸಭಾ ಸದಸ್ಯ ಇಕ್ಬಾಲ್ ಐಎಂಆರ್ ಮುಂತಾದವರು ಉಪಸ್ಥಿತರಿದ್ದರು