ಬಂಟ್ವಾಳ

ವಿಧಾನಪರಿಷತ್ತು ಚುನಾವಣೆ: ಬಂಟ್ವಾಳದಲ್ಲಿ ಉತ್ತಮ ಮತದಾನ

ಪಾರ್ಕಿಂಗ್ ಸಮಸ್ಯೆ, ವಾಹನದಟ್ಟಣೆ, ರಸ್ತೆ ಅವ್ಯವಸ್ಥೆಗಳ ಆಗರವಾಗಿರುವ ಬಿ.ಸಿ.ರೋಡ್ ಸ್ಟೇಟ್ ಬ್ಯಾಂಕ್ ಎದುರಿನ ಭಾಗದಲ್ಲಿ ಶುಕ್ರವಾರ ಬೆಳಗ್ಗಿನಿಂದಲೇ ರಾಜಕೀಯ ಪಕ್ಷಗಳ ಕಾರ್ಯಕರ್ತರು ಮತ್ತು ಜನಪ್ರತಿನಿಧಿಗಳ ಓಡಾಟ.  ಕೆಲವರು ಪ್ಯಾಂಟನ್ನು ಮೇಲೆ ಮಾಡುತ್ತಾ ಓಡಾಡಿದರೆ, ಉಳಿದವರು ತಮ್ಮ ಬಿಳಿ ಶರಟಿಗೆ ಕೆಸರು ರಾಚದಂತೆ ಜಾಗ್ರತೆ ಮಾಡುತ್ತಿದ್ದರು. ಒಬ್ಬರಂತೂ ಎದುರಿನ ಕಟ್ಟಡದಲ್ಲಿ ಪಾರ್ಕ್ ಮಾಡಿದ್ದ ತಮ್ಮ ವಾಹನವನ್ನು ಹೊರತೆಗೆಯಲು ಬಹಳ ಪ್ರಯಾಸಪಟ್ಟರು.ಇಷ್ಟೆಲ್ಲ ನಡೆಯುತ್ತಿದ್ದ ವೇಳೆ ಪದವೀಧರರು ಮತ್ತು ಶಿಕ್ಷಕರು ತಮ್ಮ ಹಕ್ಕು ಚಲಾಯಿಸಲು ಸುರಿವ ಮಳೆಯನ್ನು ಲೆಕ್ಕಿಸದೆ ಆಗಮಿಸಿದರು.

ಹೀಗಾಗಿಯೇ ಬಂಟ್ವಾಳದಲ್ಲಿ ಶಿಕ್ಷಕರ ಕ್ಷೇತ್ರದಿಂದ ಶೇ. 84.12 ಹಾಗೂ ಪದವೀಧರ ಕ್ಷೇತ್ರದಿಂದ ಶೇ. 69.63ರಷ್ಟು ಮತದಾನವಾಗಿದೆ.

ಚುನಾವಣೆ ನಡೆಯುವುದು ಮಾಮೂಲಾದರೂ ಚುನಾವಣೆಯ ಹಿನ್ನೆಲೆಯಲ್ಲಿ ಮಾಜಿ ಸಚಿವ ರಮಾನಾಥ ರೈ ಹಾಗೂ ಶಾಸಕ ರಾಜೇಶ್ ನಾಯ್ಕ್ ಅವರು ಬೆಳಿಗ್ಗಿನಿಂದಲೇ ತಮ್ಮ ತಮ್ಮ ಬೂತ್‌ನಲ್ಲಿ ಕುಳಿತುಕೊಂಡು ಪಕ್ಷದ ಪರವಾಗಿ ಮತಯಾಚನೆ ಮಾಡುತ್ತಿದ್ದುದು ಕಂಡುಬಂತು. ಕೇವಲ ಕೆಲವೇ ಮೀಟರ್ ಅಂತರದಲ್ಲಿ ಇಬ್ಬರೂ ಕುಳಿತಿದ್ದು, ತಮ್ಮ ಬೆಂಬಲಿಗರೊಂದಿಗೆ ಮರಳಿದರು.

ಬಿ.ಸಿ.ರೋಡಿನ ಮಿನಿವಿಧಾನ ಸೌಧದಲ್ಲಿ 3 ಮತಗಟ್ಟೆಗಳಲ್ಲಿ ಪದವೀಧರ ಕ್ಷೇತ್ರದ ಮತದಾರರು ಮತ ಚಲಾವಣೆ ಮಾಡಿದರೆ, ಬಿ.ಸಿ.ರೋಡಿನ ತಾಲೂಕು ಪಂಚಾಯತ್ ಕಟ್ಟಡದ ಸಾಮರ್ಥ್ಯ ಸೌಧದಲ್ಲಿ ಶಿಕ್ಷಕರ ಕ್ಷೇತ್ರದ ಮತದಾರರು ಮತಚಲಾವಣೆ ಮಾಡಿದರು.

ಬಂಟ್ವಾಳ ತಾಲೂಕಿನಲ್ಲಿ ಶಿಕ್ಷಕರ ಕ್ಷೇತ್ರಕ್ಕೆ ಒಳಪಟ್ಟಂತೆ ಒಟ್ಟು 781 ಮತದಾರರಿದ್ದು, 383 ಪುರಷರು, 398 ಮಹಿಳಾ ಮತದಾರರನ್ನು ಹೊಂದಿದ್ದರೆ, ಪದವೀಧರರ ಕ್ಷೇತ್ರದಲ್ಲಿ 2539 ಮತದಾರರಲ್ಲಿ 1261 ಪುರುಷ, 1278 ಮಹಿಳಾ ಮತದಾರರ ನೋಂದಣಿಯಾಗಿದೆ. ಈ ಪೈಕಿ ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 657 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಇದರಲ್ಲಿ 330 ಪುರುಷರು, 327 ಮಹಿಳೆಯರು ಸೇರಿದ್ದಾರೆ. ಅದೇ ರೀತಿ ಪದವೀಧರ ಕ್ಷೇತ್ರದಿಂದ ಒಟ್ಟು 1768 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಇದರಲ್ಲಿ 928 ಮಂದಿ ಪುರುಷರು, 840 ಮಂದಿ ಮಹಿಳಾ ಮತದಾರರರು ಸೇರಿದ್ದಾರೆ.

ಪಧವೀದರ/ಶಿಕ್ಷಕರ ಕ್ಷೇತ್ರದ ಚುನಾವಣೆಯ ಹಿನ್ನೆಲೆಯಲ್ಲಿ ಮಾಜಿ ಸಚಿವ ರಮಾನಾಥ ರೈ ಹಾಗೂ ಶಾಸಕ ರಾಜೇಶ್ ನಾಕ್ ಅವರು ಬೆಳಿಗ್ಗಿನಿಂದಲೇ ತಮ್ಮ ತಮ್ಮ ಬೂತ್‌ನಲ್ಲಿ ಕುಳಿತುಕೊಂಡು ಪಕ್ಷದ ಪರವಾಗಿ ಮತಯಾಚನೆ ಮಾಡಿದರು. ವಿಧಾನಸಭಾ ಚುನಾವಣೆಯಲ್ಲಿ ಸೋತ ಬಳಿಕ ಬಿ.ರಮಾನಾಥ ರೈ ಅವರು ಮತ್ತೆ ಸಾರ್ವಜನಿಕ ರಾಜಕೀಯ ವಲಯದಲ್ಲಿ ಸಕ್ರೀಯರಾಗಿ ಭಾಗವಹಿಸುವ ಮೂಲಕ ಗಮನ ಸೆಳೆದರು.

ಜೆಡಿಎಸ್ ತಾಲೂಕು ಅಧ್ಯಕ್ಷ ಬಿ.ಮೋಹನ್ ನೇತೃತ್ವದಲ್ಲಿ ಫ್ಲೈಓವರ್ ಅಡಿ ಬೂತ್ ಕಂಡುಬಂತು. ಪಿ.ಎ.ರಹೀಂ, ಹಾರೂನ್ ರಶೀದ್, ಮೊಹಮ್ಮದ್ ಶಫಿ ಮತ್ತಿತರರು ಚುನಾವಣಾ ಬೂತ್ ನಲ್ಲಿದ್ದರು. ಬಿಜೆಪಿ ಕ್ಷೇತ್ರಾಧ್ಯಕ್ಷ ಬಿ.ದೇವದಾಸ ಶೆಟ್ಟಿ, ಪ್ರಮುಖರಾದ ಸುಲೋಚನಾ ಜಿ.ಕೆ.ಭಟ್, ಜಿ.ಆನಂದ, ದಿನೇಶ್ ಭಂಡಾರಿ, ರಾಮದಾಸ ಬಂಟ್ವಾಳ, ಮೋನಪ್ಪ ದೇವಸ್ಯ ಮತ್ತಿತರರು ಬಿಜೆಪಿ ಬೂತ್ ನಲ್ಲಿದ್ದು, ಮಾಹಿತಿ ನೀಡಿದರು ಕಾಂಗ್ರೆಸ್ ಬೂತ್ ನಲ್ಲಿ ಮಾಯಿಲಪ್ಪ ಸಾಲಿಯಾನ್, ಅಬ್ಬಾಸ್ ಆಲಿ, ಚಂದ್ರಪ್ರಕಾಶ ಶೆಟ್ಟಿ, ಮಂಜುಳಾ ಮಾಧವ ಮಾವೆ, ಬೇಬಿ ಕುಂದರ್ ಮತ್ತಿತರರು ಉಪಸ್ಥಿತರಿದ್ದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ