ಬಿ.ಸಿ.ರೋಡಿನ ಹಳೇ ರಂಗಮಂದಿರದಲ್ಲಿ ಕಾರ್ಯಾಚರಿಸುತ್ತಿರುವ ಅಟಲ್ ಜೀ ಜನಸ್ನೇಹಿ ಕೇಂದ್ರವನ್ನು ಶೀಘ್ರವಾಗಿ ಮಿನಿ ವಿಧಾನ ಸೌದಕ್ಕೆ ಸ್ಥಳಾಂತರ ಮಾಡುವಂತೆ ಅದೇಶ ಹೊರಡಿಸಲು ಜಿಲ್ಲಾಧಿಕಾರಿ ಗೆ ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್ ಅವರು ಪತ್ರದ ಮೂಲಕ ತಿಳಿಸಿದ್ದಾರೆ.
ಬಂಟ್ವಾಳ ದಲ್ಲಿ ಎಲ್ಲಾ ಸೌಲಭ್ಯ ಗಳು ಒಂದೇ ಸೂರಿನಡಿ ಜನರಿಗೆ ಸಿಗುವ ನಿಟ್ಟಿನಲ್ಲಿ ಮಿನಿವಿಧಾನ ಸೌಧ ಉದ್ಘಾಟನೆಗೊಂಡು ವರ್ಷವಾಗುತ್ತಾ ಬಂದರೂ ರಂಗಮಂದಿರಲ್ಲಿ ದಲ್ಲಿ ಕಾರ್ಯಚರಿಸುತ್ತಿರುವ ಅಟಲ್ ಜೀ ಜನಸ್ನೇಹಿ ಕೇಂದ್ರವನ್ನುಮಾತ್ರ ಸ್ಥಳಾಂತರ ಮಾಡದೇ ಜನಸಾಮಾನ್ಯರು ತೊಂದರೆ ಅನುಭವವಿಸುವಂತಾಗಿದೆ. ರಂಗ ಮಂದಿರ ನಾದುರಸ್ತಿಯಲ್ಲಿದ್ದು ಮಳೆ ನೀರು ಸೋರಿ ಕಂಪ್ಯೂಟರ್ ಸಹಿತ ಕಡತಗಳು ಹಾಳಾಗಿವೆ. ಹಾಗಾಗಿ ಜನ ಸಾಮಾನ್ಯ ರು ತೊಂದರೆ ಅನುಭವಿಸುತ್ತಿದ್ದಾರೆ ಈ ವ್ಯವಸ್ಥೆ ಯನ್ನು ಸರಿಪಡಿಸಿ ಎಂದು ಶಾಸಕ ರಿಗೆ ತಾ.ಪಂ.ಸದಸ್ಯ ಪ್ರಭಾಕರ ಪ್ರಭು ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿದ ಶಾಸಕ ರಾಜೇಶ್ ನಾಯಕ್ ಅಟಲ್ ಜೀ ಜನಸ್ನೇಹಿ ಕೇಂದ್ರವನ್ನು ಮಿನಿ ವಿಧಾನ ಸೌಧಕ್ಕೆ ಸ್ಥಳಾಂತರಿಸಿ ಎಂದು ಜಿಲ್ಲಾಧಿಕಾರಿ ಗೆ ಪತ್ರದ ಮೂಲಕ ಸೂಚನೆ ನೀಡಿದ್ದಾರೆ.
| ಬಂಟ್ವಾಳ ಕೃಷಿ ಇಲಾಖೆಯ ಪರಿಸ್ಥಿತಿ | ಒಬ್ಬರಷ್ಟೇ ಕಾಯಂ ಅಧಿಕಾರಿ | ಮೂರು ವರ್ಷಗಳಿಂದ ನೇಮಕಾತಿ ಇಲ್ಲ (more…)