ಬಂಟ್ವಾಳ ತಾಲೂಕು ಕಾನೂನು ಸೇವೆಗಳ ಸಮಿತಿ, ಬಂಟ್ವಾಳ ವಕೀಲರ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ, ತಾಲೂಕು ಪಂಚಾಯತ್, ಕಂದಾಯ ಇಲಾಖೆ ಹಾಗೂ ಇತರ ಸರಕಾರಿ ಇಲಾಖೆಗಳ ಸಹಯೋಗದೊಂದಿಗೆ ಜೂ.1ರಿಂದ ೪ರವರೆಗೆ ಕಾನೂನು ಸಾಕ್ಷರತಾ ರಥ ಹಾಗೂ ಸಂಚಾರಿ ನ್ಯಾಯಾಲಯ ವಾಹನ ಚಾಲನಾ ಕಾರ್ಯಕ್ರಮ ಬಿ.ಸಿ.ರೋಡ್‌ನ ನ್ಯಾಯಾಲಯದ ಆವರಣದಲ್ಲಿ ನಡೆಯಲಿದೆ.
ಬೆಳಿಗ್ಗೆ 10ಕ್ಕೆ ಬಿ.ಸಿ.ರೋಡ್‌ನ ನ್ಯಾಯಾಲಯದ ಆವರಣದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಮುಹಮ್ಮದ್ ಇಮ್ತಿಯಾಝ್ ಅಹ್ಮದ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಕಾರ್ಯಕ್ರಮದ ಅಂಗವಾಗಿ ತಾಲೂಕಿನ ವಿವಿಧೆಡೆ ಕಾನೂನು ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 10.15ಕ್ಕೆ ಕಾರ್ಮೆಲ್ ಪ್ರೌಢಶಾಲೆ ಮತ್ತು ಕಾಲೇಜು ಮೊಡಂಕಾಪು, ಮಧ್ಯಾಹ್ನ 2ಕ್ಕೆ ಸರಕಾರಿ ಪ್ರೌಢಶಾಲೆ ಕೊಡಂಗೆ, ಸಂಜೆ 5ಕ್ಕೆ ಗ್ರಾಪಂ ತುಂಬೆ , ಜೂ. 2ರಂದು ಬೆಳಿಗ್ಗೆ 10ಕ್ಕೆ ಎಸ್‌ವಿಎಸ್ ಪ್ರೌಢಶಾಲೆ ಬಂಟ್ವಾಳ, ಮಧ್ಯಾಹ್ನ 2ಕ್ಕೆ ಲೊರೆಟ್ಟೊ ಪ್ರೌಢಶಾಲೆ ಅಮ್ಟಾಡಿ, ಸಂಜೆ 5ಕ್ಕೆ ನ್ಯಾಯಲಯದ ಆವರಣ ಬಂಟ್ವಾಳ, ಜೂ. 3ರಂದು ಬೆಳಿಗ್ಗೆ 1ಕ್ಕೆ ಸತ್ಯ ಸಾಯಿಲೋಕ ಸೇವಾ ಪ್ರೌಢಶಾಲಾ ಸಭಾಂಗಣ ಶಾರದಾ ವಿಹಾರ ಅಳಿಕೆ, ಮಧ್ಯಾಹ್ನ 12ಕ್ಕೆ ಶ್ರೀರಾಮ ವಿದ್ಯಾರ್ಥಿ ನಿಲಯ ಕಲ್ಲಡ್ಕ, ಸಂಜೆ 4ಕ್ಕೆ ಅನ್ನಪೂರ್ಣೇಶ್ವರೀ ದೇವಸ್ಥಾನ ಆವರಣ, ಜೂ. 4ರಂದು ಬೆಳಿಗ್ಗೆ 10ಕ್ಕೆ ಶಾರದಾ ಪ್ರೌಢಶಾಲೆ ಪಾಣೆಮಂಗಳೂರು, ಮಧ್ಯಾಹ್ನ 2ಕ್ಕೆ ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆ ಶಂಭೂರು, ಸಂಜೆ 5ಕ್ಕೆ ಮಿನಿವಿಧಾನಸೌಧ ಬಂಟ್ವಾಳ ದಲ್ಲಿ ಸಮಾರೋಪ ಸಮಾರಂಭ ಜರಗಲಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.