ಬಂಟ್ವಾಳ

ಸವಾಲು ಎದುರಿಸಲು ಸಜ್ಜಾಗಿ: ಹರಿಕೃಷ್ಣ ಬಂಟ್ವಾಳ

ಮುಂದಿನ ಲೋಕಸಭಾಚುನಾವಣೆಯಲ್ಲಿ ಮೋದಿ ವಿರೋಧಿಗಳು ಒಂದಾಗಲಿದ್ದು, ಈ ಸವಾಲು ಎದುರಿಸಲು ಸಜ್ಜಾಗಬೇಕು ಎಂದು ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ ಹೇಳಿದ್ದಾರೆ.

ಪಂಜಿಕಲ್ಲುಗ್ರಾಮದ ಪುಂಚೋಡಿಯಲ್ಲಿ ಬಿಜೆಪಿ ಕಾರ್ಯಕರ್ತರ ಅಭಿನಂದನಾ ಸಭೆಯಲ್ಲಿ ಅವರು ಮಾತನಾಡಿದರು.

ಜಾಹೀರಾತು

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮಾತನಾಡಿ ಪಕ್ಷ ಸಂಘಟಿತವಾಗಿ ಬಾರಿ ಚುನಾವಣೆ ಎದುರಿಸಿದ್ದರಿಂದ ಗೆಲುವು ನಮ್ಮದಾಯಿತು ಎಂದರು.

ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ತಮ್ಮ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದು, ಅವರಿಗೆ ನಿಜವಾಗಿಯೂ ಅಭಿನಂದನೆ ಸಲ್ಲಬೇಕು ಎಂದರು.

ಜಿ.ಪಂ ಸದಸ್ಯರಾದ ತುಂಗಪ್ಪ ಬಂಗೇರಾ ಪಂಜಿಕಲ್ಲು ಭಾಗದ ಕಾರ್ಯಕರ್ತರ ಪರಿಶ್ರಮದಿಂದ ಪಂಜಿಕಲ್ಲುಗ್ರಾಮ ಪಂಚಾಯತ್ವ್ಯಾಪ್ತಿಯಲ್ಲಿ ಬಿಜೆಪಿಗೆ ಒಂದು ಸಾವಿರಕ್ಕೂ ಮಿಕ್ಕಿದಮತಗಳ ಮುನ್ನಡೆ ದೊರಕಲು ಸಾಧ್ಯವಾಯಿತೆಂದರು. ಬಳಿಕ ಸಂಜೀವ ಪೂಜಾರಿ ಪಿಲಿಂಗಾಲು ಮಾತನಾಡಿ ಬಿಜೆಪಿ ಗೆಲುವಿಗೆ ಸಹಕರಿಸಿದ ಎಲ್ಲಾ ಮತದಾರರಿಗೂ ಕಾರ್ಯಕರ್ತರಿಗೂ ಅಭಿನಂದನೆಯನ್ನು ಸಲ್ಲಿಸಿದರು. ಸಂದರ್ಭದಲ್ಲಿ ಕರುಣೇಂದ್ರ ಪೂಜಾರಿ, ಬಿಜೆಪಿ ಗ್ರಾಮ ಪಂಚಾಯತ್ ಸಮಿತಿಅಧ್ಯಕ್ಷರಾದ ಚಿದಾನಂದ ಕುಲಾಲ್,ಗ್ರಾಮ ಪಂಚಾಯತ್ಉಪಾದ್ಯಕ್ಷರಾದ ಲಕ್ಷ್ಮಣ್ ಪಂಜಿಕಲ್ಲು, ದಯಾನಂದ ಗೌಡ, ಹರೀಶ್ ಪೂಜಾರಿ, ಮಾಜಿ ಅಧ್ಯಕ್ಷೆ ಹರೀಣಾಕ್ಷಿ, ಬೂತ್ ಸಮಿತಿ ಅಧ್ಯಕ್ಷರಾದ ವಿಕೇಶ್, ಕೆ.ಎನ್ ಶೇಖರ್ ಮತ್ತು ಪಕ್ಷದ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts