ಬಂಟ್ವಾಳ

ಬಂಟ್ವಾಳ: ಮಳೆಗೆ ಹಲವೆಡೆ ಹಾನಿ

ಬಂಟ್ವಾಳ ತಾಲೂಕಿನಲ್ಲಿ ಮಂಗಳವಾರ ಸುರಿದ ಭಾರಿ ಗಾಳಿ ಮಳೆಗೆ ತಾಲೂಕಿನ ಹಲವೆಡೆ ಹಾನಿಗಳಾಗಿವೆ. ಕರಿಯಂಗಳ ಗ್ರಾಮದ ಕಿನ್ನಿಗುಡ್ಡೆ ಎಂಬಲ್ಲಿ ಹೊನ್ನಯ್ಯ ಎಂಬವರ ಪತ್ನಿ ಮಂಜು ಎಂಬವರ ಮನೆಗೆ ಮರ ಬಿದ್ದು ಭಾಗಶಃ ಹಾನಿಯಾಗಿದ್ದು ಸುಮಾರು50 ಸಾವಿರದಷ್ಟು ನಷ್ಟ ಉಂಟಾಗಿದೆ.

ಜಾಹೀರಾತು

ಬಿ.ಮೂಡ ಗ್ರಾಮದ ಶಿವಯ್ಯ ಎಂಬವರ ಮಗ ಸಾಧು ಎಂಬವರ ಮನೆಗೆ ಹತ್ತಿರದ ಆವರಣ ಗೋಡೆ ಬಿದ್ದು  ನಷ್ಟ ಉಂಟಾಗಿದೆ. ಬಿ ಮೂಡ ಗ್ರಾಮದ ಕಡಪಿಕರಿಯ ಎಂಬಲ್ಲಿ ಮೋನಪ್ಪ ಎಂಬವರ ಮಗ ಭಾಸ್ಕರ ಎಂಬವರ ಮನೆಯ ಅವರಣ ಗೊಡೆ ಬಿದ್ದು ಜರಿದು ಮನೆ ಜಕಂ ಹಾಗೂ ಅಡಿಕೆ ಮರಕ್ಕೆ ಹಾನಿ ಉಂಟಾಗಿದ್ದು ಸುಮಾರು 50 ಸಾವಿರ ರೂ ನಷ್ಟ ಉಂಟಾಗಿದೆ.

ಬಿ ಮೂಡ ಗ್ರಾಮದ ಪಲ್ಲಮಜಲು ಸುಧಾಕರ್ ಎಂಬವರ ಹೆಂಡತಿ ವಿದ್ಯಾ ಎಂಬವರ ಅವಾರಣ ಗೋಡೆ ಬಿದ್ದು 50 ಸಾವಿರ ರೂ ನಷ್ಟ ಉಂಟಾಗಿದೆ. ಅಬ್ಲುಲ್ ಲತೀಪ್ ನಂದರಬೆಟ್ಟು ಮನೆಗೆ ಆವರಣ ಗೋಡೆ ಕುಸಿದಿದೆ.

ಘಟನಾ ಸ್ಥಳಗಳಿಗೆ ಪ್ರತ್ಯೇಕವಾಗಿ ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ, ಗ್ರಾಮ ಲೆಕ್ಕಾಧಿಕಾರಿ ಪ್ರಶಾಂತ್, ಶಿವಾನಂದ ನಾಟೇಕಾರ್, ಸಿಬ್ಬಂದಿಗಳಾದ ಅಶೋಕ್, ರೂಪೇಶ್ ಕರಿಯಂಗಳ, ಸದಾಶಿವ ಕೈಕಂಬ’ ಅಶೋಕ್’ ಶೀತಲ್, ಚಂದ್ರಶೇಖರ್ ಭೇಟಿ ನೀಡಿ ಸ್ಥಳ ಮಹಜರು ಮಾಡಿದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts