ಪ್ರಮುಖ ಸುದ್ದಿಗಳು

ಖ್ಯಾತ ಛಾಯಾಚಿತ್ರ ಪತ್ರಕರ್ತ ಕೇಶವ ವಿಟ್ಲ ಇನ್ನಿಲ್ಲ

www.bantwalnews.com – ಸಂಪಾದಕ: ಹರೀಶ ಮಾಂಬಾಡಿ

ಕೇಶವ ವಿಟ್ಲ ಅವರಲ್ಲಿನ ಸಂವೇದನೆಗಳು ಎದ್ದು ಕಾಣಿಸುವುದೇ ಇಂಥ ಸನ್ನಿವೇಶಗಳಲ್ಲಿ. ಐಸ್ ಕ್ರೀಮ್ ತಿನ್ನಲು ಹೊರಟಂತಿದೆ ಈ ಹಸು. ವಿಟ್ಲದಲ್ಲಿ ಕಂಡ ಈ ದೃಶ್ಯವನ್ನು ಕೇಶವ ವಿಟ್ಲ ಅವರು ಸೆರೆಹಿಡಿದು ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಿದ್ದರು. ರಾಜ್ಯದ ಖ್ಯಾತ ಛಾಯಾಚಿತ್ರ ಪತ್ರಕರ್ತರಲ್ಲೊಬ್ಬರು ಕೇಶವ ವಿಟ್ಲ ಬಂಟ್ವಾಳ ತಾಲೂಕಿನ ವಿಟ್ಲದವರು. ಬಂಟ್ವಾಳನ್ಯೂಸ್ ಆರಂಭದಿಂದಲೂ ಅದರ ಪ್ರೋತ್ಸಾಹಕರಾಗಿ ಮೆಚ್ಚುಗೆಯ ಮಾತುಗಳನ್ನಾಡಿ, ಆಶೀರ್ವದಿಸಿದ್ದ ಹಿರಿಯ ಸ್ನೇಹಿತ ಕೇಶವ ವಿಟ್ಲ ಅವರಿಗೆ ಬಂಟ್ವಾಳನ್ಯೂಸ್ ಶ್ರದ್ಧಾಂಜಲಿ ಅರ್ಪಿಸುತ್ತಿದೆ. ಸೋಮವಾರ ಬೆಳಗ್ಗೆ ಅವರು ನಿಧನಹೊಂದಿದ್ದಾರೆ.

ಖ್ಯಾತ ಫೊಟೋಜರ್ನಲಿಸ್ಟ್ ಗಳಲ್ಲಿ ಓರ್ವರಾದ ಕೇಶವ ವಿಟ್ಲ ಇನ್ನಿಲ್ಲ. ಸೋಮವಾರ ಬೆಳಗ್ಗೆ ಅವರು ನಿಧನಹೊಂದಿದ್ದಾರೆ. ಬಂಟ್ವಾಳ ತಾಲೂಕಿನ ವಿಟ್ಲದವರಾದ ಅವರು ನಾನಾ ಪತ್ರಿಕೆಗಳಲ್ಲಿ ಕೆಲಸ ಮಾಡಿದವರು. 57ರ ಹರೆಯದ ಅವರು ಮುಂಗಾರು ಪತ್ರಿಕೆ ಮೂಲಕ ಪತ್ರಿಕಾ ಛಾಯಾಗ್ರಾಹಕರಾಗಿ ವೃತ್ತಿಜೀವನ ಆರಂಭಿಸಿದವರು. ಬೆಂಗಳೂರಿನ ಇಂಡಿಯನ್ ಎಕ್ಸ್ ಪ್ರೆಸ್ ಬಳಗದಲ್ಲಿ ಸುದೀರ್ಘ ಕಾಲ ಕರ್ತವ್ಯ ಸಲ್ಲಿಸಿದ ಬಳಿಕ ಹವ್ಯಾಸಿ ಛಾಯಾಗರಾಹಕರಾಗಿ ನಾನಾ ಪತ್ರಿಕೆಗಳಿಗೆ ಫೊಟೋಗಳನ್ನು ಒದಗಿಸುತ್ತಿದ್ದರು. ಪತ್ರಿಕಾ ಛಾಯಾಗ್ರಾಹಕರಾಗಿರುವುದರ ಒಟ್ಟಿಗೆ ಸಂವೇದನಾಶೀಲ ವ್ಯಕ್ತಿತ್ವದವರಾಗಿದ್ದ ಕೇಶವ್, ಬದುಕಿನ ಹಲವು ಸೂಕ್ಷ್ಮಗಳನ್ನು ತನ್ನ ಫೊಟೋಗಳ ಮೂಲಕ ತೆರೆದಿಡುತ್ತಿದ್ದರು.

ಜಾಹೀರಾತು

‘ಮುಂಗಾರು’ ಪತ್ರಿಕೆ ಮೂಲಕ 1984ರಲ್ಲಿ (ಜನನ: 1961) ಪತ್ರಿಕಾ ಛಾಯಾಗ್ರಹಣ ಆರಂಭಿಸಿದ್ದ ಕೇಶವ್, ಕ್ಯಾಮೆರಾ ಕಣ್ಣಿನಿಂದ ಹೊಸ ಲೋಕ ತೋರಿಸಿಕೊಟ್ಟಿದ್ದ ಕೇಶವ ವಿಟ್ಲ Facets of Karnataka – A Pictorial Journey ಕೃತಿಯ ಮೂಲಕ ಕರ್ನಾಟಕದ ಹೊಸ ಒಳನೋಟಗಳನ್ನು ಸೆರೆಹಿಡಿದಿದ್ದರು. ರಾಜ್ಯ ಪ್ರವಾಸೋದ್ಯಮ‌ ಇಲಾಖೆ ಈ ಸಂಪುಟವನ್ನು ಪ್ರಕಟಿಸಿತ್ತು.

ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದಿಂದ ಶ್ರೇಷ್ಠ ಸುದ್ದಿ ಛಾಯಾಗ್ರಾಹಕ ಪ್ರಶಸ್ತಿ , ಬೆಂಗಳೂರು ಪ್ರೆಸ್ ಕ್ಲಬ್‍ನ ಜೀವಮಾನ ಸಾಧನೆಗಾಗಿ ಪ್ರಶಸ್ತಿ , ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ , ಬಲಿಯೇಂದ್ರ ಪುರಸ್ಕಾರ , ತುಳುನಾಡ ಸಿರಿ ಪ್ರಶಸ್ತಿ ಪುರಸ್ಕೃತರಾಗಿರುವ ಕೇಶವ ವಿಟ್ಲ ಅವರು ಹಲವು ಏಕವ್ಯಕ್ತಿ ಛಾಯಾಚಿತ್ರ ಪ್ರದರ್ಶನಗಳನ್ನು ಆಯೋಜಿಸಿದ್ದರು.

ಅವರ ಬಗ್ಗೆ ಮತ್ತಷ್ಟು :

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts