ಬಂಟ್ವಾಳ

ಎಂದಿನಂತೆ ನಡೆಯಿತು ಬಂಟ್ವಾಳ ತಾಲೂಕಿನ ಚಟುವಟಿಕೆ

siddakatte

b.c.road Pic: S.R.Kaikamba

ರೈತರ ಸಾಲ ಮನ್ನಾ ಆಗ್ರಹಿಸಿ ಬಂದ್‌ಗೆ ಬಂಟ್ವಾಳ ತಾಲೂಕಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಲ್ಲಡ್ಕ, ಸಿದ್ಧಕಟ್ಟೆ, ಬಂಟ್ವಾಳ ಪೇಟೆಯಲ್ಲಿ ಕೆಲವು ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು ಹೊರತುಪಡಿಸಿದರೆ, ತಾಲೂಕಿನ ಪ್ರಮುಖ ವ್ಯವಹಾರ ಕೇಂದ್ರವಾದ ಬಿ.ಸಿ.ರೋಡ್ ನಲ್ಲಿ ಎಂದಿನಂತೆಯೇ ಚಟುವಟಿಕೆಗಳು ಇದ್ದವು.
ಬಂಟ್ವಾಳದಲ್ಲಿ ಬಿಜೆಪಿ ಕಾರ್ಯಕರ್ತರು ಬೆಳಗ್ಗಿನ ಹೊತ್ತು ಅಂಗಡಿಮುಂಗಟ್ಟು ಮುಚ್ಚಿ ಸಹಕರಿಸುವಂತೆ ಮನವಿ ಮಾಡಿದ್ದು ಬಹುತೇಕ ಅಂಗಡಿಗಳು ಬಾಗಿಲು ತೆರೆಯಲಿಲ್ಲ. ಏರು ಹೊತ್ತಿನ ಬಳಿಕ ವ್ಯವಹಾರ ನಡೆದವು. ಕಲ್ಲಡ್ಕ ಪೇಟೆಯಲ್ಲಿ ಕೆಲವು ಅಂಗಡಿ, ಮುಂಗಟ್ಟುಗಳನ್ನು ಮುಚ್ಚಲಾಯಿತು. ಎಂದಿನಂತೆ ವ್ಯವಹಾರ ಕಲ್ಲಡ್ಕದಲ್ಲಿ ಕಂಡುಬರಲಿಲ್ಲ. ಆದರೆ ವಾಹನ ಸಂಚಾರಕ್ಕೆ ಅಡ್ಡಿಯಾಗಲಿಲ್ಲ. ಮಾಣಿ, ಫರಂಗಿಪೇಟೆ, ಪಾಣೆಮಂಗಳೂರು, ಮೆಲ್ಕಾರ್, ಸಜೀಪ, ಮಂಚಿ, ಸಾಲೆತ್ತೂರು ಸಹಿತ ಇತರ ಪ್ರಮುಖ ಪಟ್ಟಣಗಳಲ್ಲಿ ಅಂಗಡಿ ಮುಂಗಟ್ಟು ತೆರೆದಿದ್ದವು.

Photos and video: S.R. Kaikamba

ಜಾಹೀರಾತು

video:

https://www.youtube.com/watch?v=MUFoplfMSjg

 

 

 

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts