ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯಲ್ಲಿ 24 ವರ್ಷಗಳ ಕಾಲ ನೌಕರರಾಗಿ ಕರ್ತವ್ಯ ಸಲ್ಲಿಸುತ್ತಿದ್ದ ಕೊ.ಶಿವಪ್ಪ ಕೊಕ್ಕಪುಣಿ (54) ಅಲ್ಪಕಾಲದ ಅಸೌಖ್ಯದಿಂದ
ಮೇ 24ರಂದು ಅಪರಾಹ್ನ ನಿಧನ ಹೊಂದಿದರು.
ಪತ್ನಿ ಹಾಗೂ ಓರ್ವ ಪುತ್ರ, ಓರ್ವ ಪುತ್ರಿ ಮತ್ತು ಅಪಾರ ಬಂಧು ಬಳಗದವರನ್ನು ಅವರು ಅಗಲಿದ್ದಾರೆ.
ಹವ್ಯಾಸಿ ಯಕ್ಷಗಾನ ಭಾಗವತರಾಗಿದ್ದ ಅವರು, ಹವ್ಯಾಸಿ ಕಲಾ ತಂಡಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ಕಲ್ಲಡ್ಕದಲ್ಲಿ ಶ್ರೀರಾಮ ಯಕ್ಷಗಾನ ಕಲಾ ಸಂಘ ಸ್ಥಾಪಿಸಿ ಅದನ್ನು ಮುನ್ನೆಡೆಸಿದ ಕೀರ್ತಿಗೆ ಪಾತ್ರರಾಗಿದ್ದ ಅವರು, ನುರಿತ ಭಜನಾಪಟುವಾಗಿದ್ದರು. ಯಕ್ಷಗಾನ ಹಿಮ್ಮೇಳ ವಾದಕರಾಗಿಯೂ ಕೆಲಸ ಮಾಡುತ್ತಿದ್ದ ಅವರು ನುರಿತ ತಬಲಾ ವಾದಕರಾಗಿದ್ದರು. ಶ್ರೀ ಶಾರದಾಂಬಾ ಮಹಿಳಾ ಹವ್ಯಾಸಿ ಯಕ್ಷಗಾನ ಕಲಾ ಸಂಘ ಬೋಳಂತೂರು ನಿರ್ದೇಶಕರಾಗಿ ಅತ್ಯುತ್ತಮ ಕಲಾ ತಂಡಎಂದು ಹೆಸರುಪಡೆದಿತ್ತು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಟ್ಲ ತಾಲೂಕಿನ ಘೋಷ್ ಪ್ರಮುಖರಾಗಿ ಜವಾಬ್ಧಾರಿ ನಿರ್ವಹಿಸಿದ್ದ ಅವರು, ವಿದ್ಯಾಕೇಂದ್ರವಲ್ಲದೇ ಅನೇಕ ಘೋಷ್ ವಾದಕರನ್ನು, ಯಕ್ಷಗಾನ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಿ ಬೆಳೆಸಿದವರು. ಬೋಳಂತೂರು ತುಳಸಿವನ ಸಿದ್ದಿವಿನಾಯಕ ಭಜನಾಮಂದಿರದಲ್ಲಿ ತೊಡಗಿಸಿಕೊಂಡಿದ್ದರು.
ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಅಧ್ಯಕ್ಷ ಡಾ.ಪ್ರಭಾಕರ ಭಟ್, ಕಮಲಾ ಪ್ರಭಾಕರ ಭಟ್, ಮನೆಗೆ ಬೇಟಿ ನೀಡಿ ಮನೆ ಮಂದಿಗೆ ಸಾಂತ್ವನ ಹೇಳಿ ಮೃತರ ಆತ್ಮಕ್ಕೆ ಚಿರಶಾಂತಿ ಕೋರಿದರು. ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ಬಿ. ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ, ಸಹ ಸಂಚಾಲಕ ರಮೇಶ್ ಎನ್, ಆಡಳಿತ ಮಂಡಳಿ ಸದಸ್ಯರೂ ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ರುಕ್ಮಯ ಪೂಜಾರಿ, ಗ್ರಾಮ ಪಂಚಾಯತ್‌ಉಪಾಧ್ಯಕ್ಷ ಚಂದ್ರಶೇಖರ ರೈ, ಚೆನ್ನಪ್ಪ ಕೋಟ್ಯಾನ್, ದಿನೇಶ್ ಅಮ್ಟೂರು, ನೇಮಿರಾಜ್ ರೈ, ಮಹಾಬಲ ರೈ ಬೋಳಂತೂರು, ರಾಧಾಕೃಷ್ಣ ಅಡ್ಯಂತಾಯ ಹಾಗೂ ವಿದ್ಯಾಕೇಂದ್ರದ ಎಲ್ಲಾ ಅಧ್ಯಾಪಕ, ಅಧ್ಯಾಪಕೇತರ ಬಂಧುಗಳು, ಊರ ಪರವೂರ ಗಣ್ಯರು ಭೇಟಿ ನೀಡಿ ಚಿರಶಾಂತಿ ಕೋರಿದರು.