ಬಂಟ್ವಾಳದ ನೂತನ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಾಲೂಕಿನ ಸಿದ್ದಕಟ್ಟೆಯಲ್ಲಿ ಕಾರ್ಯಕರ್ತರಿಗೆ ಕೃತಜ್ಞತಾ ಸಲ್ಲಿಕೆಯ ಸಭೆಯಲ್ಲಿ ಮಂಗಳವಾರ ಭಾಗವಹಿಸಿದರು. ಈ ಸಂದರ್ಭ ಮಾತನಾಡಿದ ಅವರು ಈ ವಿಜಯವನ್ನು ಕಾರ್ಯಕರ್ತರಗೆ ಅರ್ಪಿಸುತ್ತೇನೆ ಎಂದು ಹೇಳಿದರು.
ಕ್ಷೇತ್ರದ ಪ್ರತಿನಿಧಿಯಾಗಿ ಕ್ಷೇತ್ರದ ಉತ್ತಮ ಕೆಲಸದೊಂದಿಗೆ ಧರ್ಮದ, ಸಂಸ್ಕೃತಿಯ ರಕ್ಷಣೆ, ಕ್ಷೇತ್ರದ ಜನರ ರಕ್ಷಣೆಯ ಹೊಣೆಗಾರಿಕೆ ನನ್ನಲ್ಲಿದೆ. ಗೆಲುವಿಗೆ ಕಾರ್ಯಕರ್ತರ ಅವಿರತ ಶ್ರಮವೇ ಕಾರಣ. ಹಿಂದೆ ಇದ್ದಂತೆ ಇನ್ನು ಮುಂದೆಯೂ ನಾನು ಕಾರ್ಯಕರ್ತರ ನಡುವೆ ಇರುತ್ತೇನೆ ಎಂದು ಅವರು ಹೇಳಿದರು.
2013 ರ ವಿಧಾನ ಸಭೆಯ ಸೋಲನ್ನು ಸವಾಲಾಗಿ ಸ್ವೀಕರಿಸಿ ಬಂಟ್ವಾಳ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯಕ್ ಉಳಿಪ್ಪಾಡಿ ಗುತ್ತು ಕ್ಷೇತ್ರದಲ್ಲಿ ನಿರಂತರ ಸಂಚರಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸಿದ ಕಾರಣ ಗೆಲುವು ಸಾಧ್ಯವಾಯಿತು ಎಂದು ಕ್ಷೇತ್ರದ ಅಧ್ಯಕ್ಷ ದೇವದಾಸ ಶೆಟ್ಟಿ, ಹೇಳಿದರು.
ಪ್ರಧಾನ ಕಾರ್ಯದರ್ಶಿ ರಾಮದಾಸ ಬಂಟ್ವಾಳ, ಪ್ರಮುಖರಾದ ರಮಾನಾಥ ರಾಯಿ, ಸತೀಶ್ ಪೂಜಾರಿ, ವಸಂತ ಅಣ್ಣಳಿಕೆ, ಹರೀಶ್ ಅಚಾರ್ಯ, ನಂದಕುಮಾರ್ ರೈ, ಗುಲಾಬಿ ಶೆಟ್ಟಿ, ದಯಾನಂದ ಸಪಲ್ಯ, ರಾಜೇಶ್ ಶೆಟ್ಟಿ, ನಾಗೇಶ್ ಮಾನಾಯಿ, ಸಂತೋಷ ರಾಯಿಬೆಟ್ಟು. ರತ್ನ ಕುಮಾರ್ ಚೌಟ ಸ್ವಾಗತಿಸಿದರು. ಎಸ್.ಪಿ.ಶ್ರೀಧರ ವಂದಿಸಿದರು. ಪಕ್ಷದ ಪ್ರಮುಖ ಪ್ರಭಾಕರ ಪ್ರಭು ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭ ನೂತನ ಶಾಸಕರನ್ನು ಅಭಿನಂದಿಸಲಾಯಿತು. ಸ್ಥಳೀಯ ಸಮಸ್ಯೆಗಳ ಅಹವಾಲು ನೀಡಲಾಯಿತು.