www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ರಾಜ್ಯದ ಜನತೆಗೆ ಭರವಸೆ ಕೊಡ್ತೇನೆ. ಇನ್ನೈದು ವರ್ಷ ಅಥವಾ ಅದರ ಮಧ್ಯ ಮತ್ತೊಮ್ಮೆ ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯಬಹುದು, ಬಿಜೆಪಿಗೆ 150 ಸ್ಥಾನ ಗಳಿಸುವಂತೆ ಪ್ರಯತ್ನಿಸುತ್ತೇನೆ. ಅಧಿವೇಶನ ಮುಗಿದ ಬಳಿಕ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡುತ್ತೇನೆ. ರಾಜ್ಯದ ಜನತೆಗೆ ನಮನ ಸಲ್ಲಿಸುತ್ತೇನೆ. ರಾಜ್ಯದ ಶಾಸಕರಿಗೆ ಆತ್ಮಸಾಕ್ಷಿ ಮತ ಹಾಕಲು ನಾನು ಕೋರಿದ್ದೂ ನಿಜ. ಅಧಿಕಾರದಲ್ಲಿರಲಿ, ವಿರೋಧ ಪಕ್ಷದಲ್ಲಿರಲಿ, ಕುಮಾರಸ್ವಾಮಿಯವರೇ ಹೋರಾಟ ಮಾಡ್ತೇನೆ. ಜನರಿಗಾಗ ಪ್ರಾಣ ಕೊಡ್ತೇನೆ.ವಿಶ್ವಾಸಮತದ ಪ್ರಸ್ತಾಪ ಮುಂದುವರಿಸಿದ್ದೇನೆ. ಮುಖ್ಯಮಂತ್ರಿ ಸ್ಥಾನಕಕ್ಕೆ ರಾಜೀನಾಮೆ ಸಲ್ಲಿಸ್ತೇನೆ.
ಇದು ಶನಿವಾರ ಸಂಜೆ 4 ಗಂಟೆಯಾದ ಬಳಿಕ ಮೇ.17ರಂದು ಬೆಳಗ್ಗೆ 9 ಗಂಟೆಗೆ ಪ್ರಮಾಣವಚನ ಸ್ವೀಕರಿಸಿದ ಬಿ.ಎಸ್.ಯಡಿಯೂರಪ್ಪ ಶನಿವಾರ ವಿಧಾನಸಭೆಯಲ್ಲಿ ಮಾತನಾಡಿದ ರೀತಿ. ಹಾಗೆ ಹೇಳಿದ ಮಾತು ಮುಗಿಸಿದ ಯಡಿಯೂರಪ್ಪ ಎಲ್ಲರಿಗೂ ನಮಸ್ಕಾರ ಹೇಳುತ್ತಾ ರಾಜಭವನಕ್ಕೆ ತೆರಳಿದರೆ, ಇತ್ತ ಭಾವಿ ಮುಖ್ಯಮಂತ್ರಿ ಎಂದೇ ಬಿಂಬಿಸಲಾಗುತ್ತಿರುವ ಎಚ್.ಡಿ.ಕುಮಾರಸ್ವಾಮಿ ಅವರ ಮೊಗದಲ್ಲಿ ಮಂದಹಾಸ ಮೂಡಿತ್ತು. ಬದ್ಧವೈರಿಗಳಾದ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅದರಲ್ಲೂ ಡಿ.ಕೆ.ಶಿವಕುಮಾರ್ ಮತ್ತು ಕುಮಾರಸ್ವಾಮಿ ವಿಧಾನಸೌಧದಲ್ಲಿ ವಿಜಯದ ಸಂಕೇತವಾದ ಎರಡು ಬೆರಳುಗಳನ್ನೆತ್ತಿ ಸಂಭ್ರಮಸಿದರೆ, ಉಳಿದ ಕಾಂಗ್ರೆಸ್ ಜೆಡಿಎಸ್ ಶಾಸಕರ ಮುಖದಲ್ಲಿನ ಆತಂಕ ದೂರವಾಗಿತ್ತು. ಬಿಜೆಪಿ ಸದಸ್ಯರು ಮೌನವಾಗಿಯೇ ಯಡಿಯೂರಪ್ಪನವರನ್ನು ಹಿಂಬಾಲಿಸಿದರು.
ಆದರೆ ಮುಂದಿನ ಸರಕಾರ ಅಸ್ತಿತ್ವಕ್ಕೆ ಬರುವವರೆಗೂ ಯಡಿಯೂರಪ್ಪ ಜೋಪಾಸನಾ ಮುಖ್ಯಮಂತ್ರಿಯಾಗಿರುತ್ತಾರೆ.