ಸಮಾಜ ಸೇವಕರಾಗಿ ಸ್ವಾರ್ಥ ರಹಿತ ಸೇವೆ ಮಾಡಿ ಸಮಾಜದ ಅಭ್ಯುದಯಕ್ಕೆ ಶ್ರಮಿಸಿದ ದೋಗು ಶೆಟ್ಟಿ ಅವರ ಜೀವನ ಇತರರಿಗೆ ಮಾದರಿಯಾಗಿದೆ ಎಂದು ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ಅವರು ಹೇಳಿದರು.
ಬಂಟ್ವಾಳ ತಾ. ಅಜ್ಜಿಬೆಟ್ಟು ಗ್ರಾಮದ ಕಡ್ತಾಲಬೆಟ್ಟುವಿನಲ್ಲಿ ಇಲ್ಲಿಯ ಪ್ರಗತಿಪರ ಕೃಷಿಕ ದಿ. ದೋಗು ಶೆಟ್ಟಿ ಅವರ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
ಕಂಬಳ ಪ್ರಧಾನ ತೀರ್ಪುಗಾರ ರಾಜೀವ ಶೆಟ್ಟಿ ಎಡ್ತೂರು ಮಾತನಾಡಿ, ಶ್ರೇಷ್ಠ ವ್ಯಕ್ತಿಗಳು ಪರೋಪಕಾರ ಗುಣದಿಂದ ಜನಮಾನಸದಲ್ಲಿ ಮರಣದ ಬಳಿಕವೂ ಸ್ಮರಣೀಯರಾಗಿರುತ್ತಾರೆ ಎಂದು ಹೇಳಿದರು.
ಕೆನರಾ ಬಸ್ ಮಾಲಕ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್, ಉಪನ್ಯಾಸಕ ಭಾಸ್ಕರ ರೈ ಕುಕ್ಕುವಳ್ಳಿ, ರಮೇಶ್ ರೈ ಕುಕ್ಕುವಳ್ಳಿ, ಪ್ರಮುಖರಾದ ಕೃಷ್ಣ ಶೆಟ್ಟಿ ಗೋಂಜಗುತ್ತು, ವಸಂತ ಶೆಟ್ಟಿ ಕೇದಗೆ, ಜಗದೀಶ ಕುಂದರ್, ದೇವಪ್ಪ ಶೆಟ್ಟಿ ಕುಂಟಜಾಲು, ರಮೇಶ್ ಶೆಟ್ಟಿ ವಾಮದಪದವು, ದೋಗು ಶೆಟ್ಟಿ ಅವರ ಪುತ್ರರಾದ ಯಶ್ವಿನ್, ಯತೀನ್ ಮತ್ತಿತರರು ಉಪಸ್ಥಿತರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…