ಫರಂಗಿಪೇಟೆ ಸಮೀಪ ಅಮ್ಮೆಮಾರ್ ಎಂಬಲ್ಲಿ ಹಸುಗಳನ್ನು ಕಡಿದು ಮಾಂಸ ಮಾಡಿ ಮಾರುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಗುರುವಾರ ರಾತ್ರಿಗಸ್ತು ತಿರುಗುತ್ತಿದ್ದ ಪೊಲೀಸರು ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆಸಿದ್ದಾರೆ. ಈ ಸಂದರ್ಭ ಒಂದು ಹಸು, ಮೂರು ದಿನದ ಕರುವೂ ವಧೆಗಾಗಿ ಕಟ್ಟಲಾಗಿದ್ದನ್ನು ಕಂಡ ಪೊಲೀಸರು ಅವುಗಳನ್ನು ಠಾಣೆಗೆ ಕರೆತಂದರು.
ಸ್ಥಳದಲ್ಲಿ ಹಸುಗಳನ್ನು ಕಡಿದು ಮಾಂಸ ಮಾಡಿದ್ದ 11 ಹಸುವಿನ ಚರ್ಮ ಗಳು, ದನದ ಮಾಂಸ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿಯಲ್ಲಿ ಪ್ರೋಬೆಸನರಿ ಐಪಿಎಸ್ ಅಕ್ಷಯ್ ಎಮ್ ಹಾಕೆ, ವ್ರತ್ತ ನಿರೀಕ್ಷಕ ಪ್ರಕಾಶ್, ಬಂಟ್ವಾಳ ಗ್ರಾಮಾಂತರ ಠಾಣಾ ಎಸ್ ಐ ಪ್ರಸನ್ನ, ಸಿಬ್ಬಂದಿ ಗಳಾದ ಬಶೀರ್, ಜನಾರ್ದನ, ಸುರೇಶ್, ನಜೀರ್, ನಾಗನಾಥ್, ವಿಶಾಲಾಕ್ಷಿ ಭಾಗವಹಿಸಿದ್ದರು.
ಕೆ.ಎನ್.ಆರ್. ಕನ್ಸಸ್ಟ್ರಕ್ಷನ್ಸ್ ಗುತ್ತಿಗೆ ವಹಿಸಿಕೊಂಡಿರುವ ಬಿ.ಸಿ.ರೋಡ್ ಭಾಗದ ಕಾಮಗಾರಿಯಲ್ಲಿ ಸೇತುವೆ ಪೂರ್ಣಗೊಳಿಸಿ ಓಡಾಟ ಆರಂಭಗೊಂಡಿರುವುದು ಮಹತ್ವದ ಹೆಜ್ಜೆಯಾಗಿದ್ದು, ಬಿ.ಸಿ.ರೋಡ್ ಸರ್ಕಲ್…