ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಬಿ.ಸಿ.ರೋಡಿನ ಫ್ಲೈ ಓವರ್ ಬಳಿ ಬಿಜೆಪಿ ಕಾರ್ಯಕರ್ತರು ಗುರುವಾರ ಬೆಳಗ್ಗೆ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಬಂಟ್ವಾಳ ಕ್ಷೇತ್ರದ ಪ್ರಧಾನ ಕಾರ್‍ಯದರ್ಶಿಗಳಾದ ರಾಮದಾಸ ಬಂಟ್ವಾಳ, ಮೋನಪ್ಪ ದೇವಸ್ಯ ಪ್ರಮುಖರಾದ ಮಹಾಬಲ ಶೆಟ್ಟಿ ಎಂ, ಮಚ್ಚೇಂದ್ರ ಸಾಲ್ಯಾನ್, ಸದಾನಂದ ಗೌಡ, ಉಮೇಶ್ ಅರಳ, ಜಯರಾಮ್ ಭಂಡಾರಿ , ರಮೇಶ್ ಸಾಲ್ಯಾನ್, ವಿಜಯ ರೈ, ಮನೋಜ್ ಕಳ್ಳಿಗೆ, ಗುರುದತ್ ನಾಯಕ್, ಶಿವ ಕುಪ್ಪಿಲ, ರವಿಕಿರಣ್, ಶ್ರೀನಿವಾಸ್, ತಿಮ್ಮಪ್ಪ ಅಂಚನ್, ಭಾಸ್ಕರ್,ಸಂಜೀವ ಉಪಸ್ಥಿತರಿದ್ದರು. ಅದಾದ ಬಳಿಕ ಪಟಾಕಿ ಸಿಡಿಸಿದ ಜಾಗವನ್ನು ಕಾರ್ಯಕರ್ತರೇ ಸ್ವಚ್ಛಗೊಳಿಸಿದರು.