ಬಂಟ್ವಾಳದ ಶಾಸಕರಾಗಿ ಚುನಾಯಿತರಾದ ಯು.ರಾಜೇಶ್ ನಾಯ್ಕ್ ಮಂಗಳವಾರ ಸಂಜೆ ಕಲ್ಲಡ್ಕ ಕ್ಕೆ ತೆರಳಿ ಆರ್ ಎಸ್ ಎಸ್ ಮುಖಂಡ ಡಾ.ಪ್ರಭಾಕರ ಭಟ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು .
ಅಲ್ಲಿಂದ ಪಣೋಲಿಬೈಲ್ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಾರ್ಥನೆಗೈದರು.
ಈ ಸಂದರ್ಭ ಬೆಳ್ತಂಗಡಿ ನೂತನ ಶಾಸಕ ಹರೀಶ್ ಪೂಂಜಾ ಸೇರಿಕೊಂಡರು. ಬಳಿಕ ಶರತ್ ಮಡಿವಾಳ ಮನೆಗೆ ತೆರಳಿ ಅವರ ಭಾವಚಿತ್ರಕ್ಕೆ ಪುಪ್ಪಾರ್ಚನೆಗೈದು,ಅವರ ಹೆತ್ತವರಿಗೆ ಸಾಂತ್ವನ ಹೇಳಿದರು. ಬಿಜೆಪಿ ಗೆಲುವು ಶರತ್ ಆಸೆ ಕೂಡ ಆಗಿತ್ತು, ಅದು ಈಡೇರಿದೆಎಂದು ಅವರು ಹೇಳಿದರು.
ಬಳಿಕ ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವಳಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭ ಪಕ್ಷದ ಮುಖಂಡರಾದ ದೇವದಾಸ ಶೆಟ್ಟಿ ,ಹರಿಕೃಷ್ಣ ಬಂಟ್ವಾಳ,ಗೋವಿಂದಪ್ರಭು,ಉದಯಕುಮಾರ್ ರಾವ್,ಪದ್ಮನಾಭ ಕೊಟ್ಟಾರಿ ,ಸುಲೋಚನ ಜಿ.ಕೆ.ಭಟ್ ,ರಾಮದಾಸ ಬಂಟ್ವಾಳ,ಮೋನಪ್ಪ ದೇವಸ್ಯ, ಚೆನ್ನಪ್ಪಕೋಟ್ಯಾನ್, ದಿನೇಶ್ ಅಮ್ಟೂರು, ಪ್ರಸಾದ್ ಕುಮಾರ್ ರೈ,ಸತೀಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಅವರು ಸಂಘನಿಕೇತನದಲ್ಲಿ ನಡೆದ ಪಕ್ಷದ ಪ್ರಮುಖರ ಸಭೆಯ ಬಳಿಕ ಜಿಲ್ಲಾ ಬಿಜೆಪಿ ಕಚೇರಿಗಾಗಮಿಸಿ ಅಲ್ಲಿಂದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಪತ್ನಿ, ಕುಟುಂಬಸ್ಥರ ಸಮೇತ ಕಾರ್ಯಕರ್ತರೊಂದಿಗೆ ಪೊಳಲಿ ಕ್ಷೇತ್ರಕ್ಕೆ ಅಗಮಿಸಿದ ಅವರು,ಶಾಸಕನಾಗಿ ಆಯ್ಕೆಯಾದ ಪ್ರಮಾಣಪತ್ರವನ್ನು ದೇವರ ಸಮ್ಮುಖದಲ್ಲಿಟ್ಟು ಪ್ರಾರ್ಥನೆಗೈದರು. ನಾಮಪತ್ರದಂದು ಕೂಡ ಅವರು ತಮ್ಮ ನಾಮಪತ್ರ ವನ್ನು ದೇವರ ನಡೆಯಲ್ಲಿಟ್ಟು ಪ್ರಾರ್ಥಿಸಿದ್ದರು.ಬಳಿಕ ಇಲ್ಲಿಂದ ಪಾದಯಾತ್ರೆ ಮೂಲಕ ಬಿ.ಸಿ.ರೋಡಿಗಾಗಮಿಸಿ ನಾಮಪತ್ರ ಸಲ್ಲಿಸಿದ್ದರು. ಬಳಿಕ ಬಿ.ಸಿ.ರೋಡು ಪಕ್ಷದ ಕಚೇರಿಗಾಗಮಿಸಿದಾಗ ಮುತ್ತೈದೆಯರು ರಾಜೇಶ್ ನಾಯ್ಕ್ ಅವರನ್ನು ಆರತಿ ಬೆಳಗಿ ಸ್ವಾಗತಿಸಿದರು.