ಓಟಿನ ಕಾಗದವನ್ನು ಓಟಿನ ಪೆಟ್ಟಿಗೆಯಲ್ಲಿಯೇ ಹಾಕಬೇಕು, ಅದನ್ನು ಹೊರಗೆ ತೆಗೆದುಕೊಂಡು ಹೋಗಬಾರದು. ಹೀಗೊಂದು ಸೂಚನೆ ಮತದಾನ ಕೇಂದ್ರದ ಹೊರಗೆ ಅಂಟಿಸಲಾಗಿದೆ. ಉಲ್ಲಂಘಿಸಿದವರಿಗೆ ಕಾನೂನಿನ ಮೇರೆಗೆ ಶಿಕ್ಷಿಸಲ್ಪಡಲಾಗುವುದು ಎಂದು ಭಯಂಕರ ಎಚ್ಚರಿಕೆಯನ್ನೂ ಆಯೋಗ ನೀಡಿ ಬೂತ್ ಎದುರು ಅಂಟಿಸಲಾಗಿದೆ. ಮೊಡಂಕಾಪಿನಲ್ಲಿರುವ ಬೂತ್ ಒಂದರಲ್ಲಿ ಈ ರೀತಿಯ ನೋಟಿಸ್ ಇದ್ದುದಾಗಿ ಮತದಾರ ಪ್ರೊ. ರಾಜಮಣಿ ರಾಮಕುಂಜ ಗಮನ ಸೆಳೆದಿದ್ದಾರೆ. ಇಂಥದ್ದು ಹಲವು ಬೂತ್ ಗಳಲ್ಲಿ ಕಂಡುಬಂದಿದೆ. ಓಟಿನ ಕಾಗದವೂ ಈಗಿಲ್ಲ, ಓಟಿನ ಪೆಟ್ಟಿಗೆಯೂ ಈಗಿಲ್ಲ. ಓಟಿನ ಯಂತ್ರ ಹಾಗೂ ಅದರ ಬೀಪ್ ಶಬ್ದವಷ್ಟೇ ಈಗಿನ ಎಲೆಕ್ಟ್ರಾನಿಕ್ ಯುಗದಲ್ಲಿರುವುದು ಎಂಬುದನ್ನು ಕೆಲವರು ಮರೆತಂತಿದೆ.!!!