ಸಾಧಕರು

ದುಬೈಯ ಬಸವ ಜಯಂತಿ : ಪದ್ಮಶ್ರೀ ಬಿ. ಜಯಶ್ರೀ ಮುಡಿಗೇರಿದ ‘ಬಸವಭೂಷಣ’ ಪ್ರಶಸ್ತಿ

ವರದಿ :ಅಡಿಗ ಕೆ .ವಿ , ದುಬೈ.

ನೀನೊಲಿದರೆ ಕೊರಡು ಕೊನರುವುದಯ್ಯ , ನೀನೊಲಿದರೆ ಬರಡು ಹಯನಹುದಯ್ಯ, ನೀನೊಲಿದರೆ ವಿಷವು ಅಮೃತವಹುದಯ್ಯ ನೀನೊಲಿದರೆ ಸಕಲಪಡಿಪದಾರ್ಥಗಳು ಇದಿರಲಿರ್ಪವು ಕೂಡಲಸಂಗಮದೇವಾ ಅಂದರು ಬಸವಣ್ಣನವರು . ಭಗವಂತನ ಅನುಗ್ರಹದಿಂದ ಕೂಡಿದ ಸಕಲ ಕಲಾವಿಧ್ವಾನರಿಂದ , ಪ್ರತಿಭಾನ್ವಿತ ಕಲಾವಿದರ ಕಲೆಯ ಪ್ರದರ್ಶನಗಳಿಂದ ಮೇ 4 ಶುಕ್ರವಾರ ಸಂಜೆ ಬಸವ ಸಮಿತಿ ದುಬೈಯವರ 12 ನೇ ವರ್ಷದ ಬಸವ ಜಯಂತಿ ಯ ಆಚರಣೆ ಹಾಗುಬಸವ ಭೂಷಣಪ್ರಶಸ್ತಿ ಪ್ರದಾನ ಸಮಾರಂಭ ಅದ್ದೂರಿಯಾಗಿ ಜರಗಿತು.
ಬಸವಣ್ಣನವರ ತೊಟ್ಟಿಲು ಪೂಜೆ , ನಾಮಕರಣ , ಮುತೈದೆಯರಿಂದ ಉಡಿ ತುಂಬುವುದು ಇಂತಹ ಸಾಂಪ್ರದಾಯಿಕ ಆಚರಣೆಗಳು ಶಾಸ್ತ್ರೋಕ್ತವಾಗಿನೆರವೇರಿದರೆ , ಪೂರ್ಣಕುಂಭ ಕಲಶ ಮತ್ತು ಚೆಂಡೆ ವಾದನಗಳೊಂದಿಗೆ ಮೆರವಣಿಗೆಯಲ್ಲಿ ಅತಿಥಿಗಳಾದ ಪಟ್ಟದ ಶ್ರೀ ಮಲಯ ಶಾಂತಮುನಿದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿಗಳು , ಪೂಜ್ಯ ಶ್ರೀ ಶಿವಶಾಂತವೀರ ಶರಣರು ಚಿಕ್ಕೇನಕೊಪ್ಪ ಬಳಗಾನೂರ ಮಠ , ಶ್ರೀ ಇಬ್ರಾಹಿಂ ಸುತಾರ್ , ಶ್ರೀಮತಿ ಬಿ. ಜಯಶ್ರೀ , ಶ್ರೀಮತಿ ಪ್ರೀತಿ ನಾಗರಾಜ್ ಹಾಗು ಗಣ್ಯರನ್ನು ಕರೆದು ತರಲಾಯಿತು .
ಸಂಕೀರ್ಣ ನೃತ್ಯಶಾಲೆಯ ವಿದ್ಯಾರ್ಥಿನಿಯರು ಪುಷ್ಪಾoಜಲಿ ನೃತ್ಯದ ಮೂಲಕ ವಿಘ್ನರಾಜನನ್ನು ಪ್ರಾರ್ಥಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಅತಿಥಿಗಳು ಹಾಗು ಬಸವ ಸಮಿತಿಯ ಸಲಹಾ ಮಂಡಳಿ ಸದಸ್ಯರು ಬಸವಣ್ಣಗೆ ನಮನ ಸಲ್ಲಿಸಿ , ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು ,ತಮ್ಮ ಪ್ರಾಥನೆಯ ಹಾಡಿನ ಮೂಲಕ ಉದಯ್ ನಂಜಪ್ಪ ಹಾಗು ರಮ್ಯಾ ಜಾಗೀರ್ದಾರ್ ಬಸವ ಬೆಳಗನ್ನು ಎಲ್ಲೆಡೆ ಪಸರಿಸಿದರು .
ಸಭಾ ಕಾರ್ಯಕ್ರಮ ದಲ್ಲಿ ಬಸವ ಸಮಿತಿಯ ಪರವಾಗಿ ಶ್ರೀ ಸಂಗಮೇಶ್ ಬಿಸರಳ್ಳಿಯವರು ಎಲ್ಲಾ ಅಥಿತಿಗಳಿಗೆ ಹಾಗು ಗಣ್ಯರಿಗೆ ಸ್ವಾಗತ ಕೋರಿದರು . ಚಿಕ್ಕೇನಕೊಪ್ಪ ಶರಣರು ಮಾತನಾಡುತ್ತ ಬಸವಣ್ಣನವರ ಕಲ್ಯಾಣ ರಾಜ್ಯದ ಕನಸನ್ನು ನನಸು ಮಾಡಲು ಅನುಸರಿಸಬೇಕಾದ ಜೀವನ ಸೂತ್ರಗಳನ್ನುವಚನ ಸಾಹಿತ್ಯದ ಆಧಾರಗಳ ಮೂಲಕ ಚೆನ್ನಾಗಿ ಮನವರಿಕೆ ಮಾಡಿದರು . ಕಾಯಕದ ನಡುವೆ ಕಳೆದು ಹೋಗದೆ ತಮ್ಮ ಸಂಪ್ರದಾಯ , ಆಚರಣೆಗಳನ್ನು ನಡೆಸಿಕೊಂಡು ಬರುತ್ತಿರುವ ದುಬೈ ಬಸವ ಅನುಯಾಯಿಗಳನ್ನು ಕೊಂಡಾಡಿದರು.
ಕಳೆದ ತಿಂಗಳಷ್ಟೇ ಭಾರತದ ನಾಲ್ಕನೇ ಸರ್ವೋಚ್ಚ ನಾಗರೀಕ ಪ್ರಶಸ್ತಿಯಾದಪದ್ಮಶ್ರೀಇಂದ ಪುರಸ್ಕೃತರಾದ ಭಾವೈಕ್ಯತೆಯ ಸಾಕಾರ ಮೂರ್ತಿ ಶ್ರೀ ಇಬ್ರಾಹಿಂ ಸುತಾರರವರು 45 ನಿಮಿಷಗಳ ಕಾಲ ತಮ್ಮ ಮಾತಿನಿಂದ ಇಡೀ ಸಭಾಂಗಣವನ್ನು ಸಮ್ಮೋಹನಗೊಳಿಸಿದರು . ಓದಿದ್ದು ಕೇವಲ 3 ನೇತರಗತಿಯ ವರೆಗಾದರು , ಸಜ್ಜನರ ಸತ್ಸಂಗಿಗಳ , ಸ್ವಾಮಿಗಳ ,ಪಂಡಿತರ ಸಂಗದಿಂದ ಸ್ವಪರಿಶ್ರಮ ದಿಂದ ನಿರಂತರ ಅಭ್ಯಾಸವೆಂಬ ತಪಸ್ಸಿನಿಂದ , ವೇದಗಳ , ವಚನಗಳ , ಪುರಾಣ ಗ್ರಂಥಗಳ ವಿವಿಧ ಧರ್ಮಗಳ ಗ್ರಂಥಗಳ , ಸಿದ್ದಾಂತ ಶಿಖಾಮಣಿಯ ಕುರಾನ್ ನಿನ ಆಳವಾದ ಅಧ್ಯಯನಮಾಡಿದ ಕನ್ನಡದ ಕಬೀರ , ಅಭಿನವ ಶರೀಫ ಭಾವೈಕ್ಯತೆಯ ದಾಸ .
ಲಿಂಗವ ನೆರೆನಂಬಿದಾತ , ಜಂಗಮಕೆ ಧನವ ಸವೆಸುವಾತ ಜವನ ಬಾಯಲು ಬಾಲವ ಕೊಯ್ದು ಹೋದಾತ ಆತ ಜಾಣನು ಎಂದು ವಚನವನ್ನುಅರ್ಥೈಸಿ ಜಾಣರಾಗಲು ಮಾರ್ಗವನ್ನು ತಿಳಿಸಿದರು. ಹಾಗೆಯೇಏಕಂ ಸತ್ ವಿಪ್ರಾ: ಬಾಹುವಿದಾ : ವದಂತಿಎಂದು ದೇವರೊಬ್ಬನೇ ನಾಮ ಹಲವು ಎನ್ನುವ ವಾದವನ್ನು ವೇದ ,ಗೀತೆ ಹಾಗು ಕುರಾನ್ ಗಳ ಉಲ್ಲೇಖ ಮಾಡಿ ನೆರೆದವರಿಗೆ ಮನದಟ್ಟು ಮಾಡಿದರು . ದೇವರು ಸರವಂತರ್ಯಾಮಿ , ವಿಶ್ವವ್ಯಾಪಿ ಎಂದು ಬಸವಣ್ಣನವರ , ಅಲ್ಲಮ ಪ್ರಭುಗಳ ಅಕ್ಕನವಚನಗಳ ಮೂಲಕ ಸಾಮ್ಯತೆಯನ್ನು ತಿಳಿಸಿದರು . ಸುಶ್ರಾವ್ಯವಾಗಿ ದಸರಾಪದವನ್ನು ಹಾಡಿದರು , ಕ್ರಮಬದ್ಧವಾಗಿ ಸ್ಪಷ್ಟ ಉಚ್ಚಾರದಿಂದ ಸಂಸ್ಕೃತದ ವೇದಗಳ ಸೂಕ್ತಗಳನ್ನು , ಮಂತ್ರಗಳನ್ನುಚ್ಛರಿಸಿದರು . ಕುರಾನ್ ಪಠಿಸಿದ ಶ್ರೀ ಇಬ್ರಾಹಿಂ ಸುತಾರರವರು .ವೇದಿಕೆಯ ಮೇಲೆ ಅಖಂಡ ಭಾರತದ ಪ್ರತಿರೂಪರಾದರು .
ಪದ್ಮಶ್ರೀ ಬಿ. ಜಯಶ್ರೀಯವರಿಗೆ ಬಸವ ಭೂಷಣ ಪ್ರಶಸ್ತಿ
ವೇದಿಕೆಯಲ್ಲಿದ್ದ ಅಥಿತಿಗಳು , ಬಸವ ಸಮಿತಿಯ ಸದಸ್ಯರು ಹಾಗು ನೆರೆದಿದ್ದ ಗಣ್ಯರ ಅಭಿಮಾನಿಗಳ ಮತ್ತು ಪ್ರೇಕ್ಷಕರ ಮುಂದೆಬಸವ ಭೂಷಣಪ್ರಶಸ್ತಿಯನ್ನು ಶ್ರೀಮತಿಜಯಶ್ರೀ ಯವರಿಗೆ ಪ್ರದಾನಿಸಲಾಯಿತು . ನಂತರ ಮಾತನಾಡಿದ ಜಯಶ್ರೀ ಯವರು ನಾನು ಪೂರ್ಣ ಮನಸ್ಸಿನಿಂದ , ಖುಷಿಯಾಗಿ ಪ್ರಶಸ್ತಿಯನ್ನು ಸ್ವೀಕರಿಸುತ್ತಿದ್ದೇವೆ ಎಂದು ನುಡಿದರು. ಸಂಧರ್ಭದಲ್ಲಿ ಅವರ ಜೊತೆ ಅವರ ಆತ್ಮ ಚರಿತ್ರೆಕಣ್ಣಾಮುಚ್ಛೇ ಕಾಡೇ ಗೂಡೆಯನ್ನು ನಿರೂಪಿಸಿದ ಪತ್ರಕರ್ತೆ ಪ್ರೀತಿ ನಾಗರಾಜ್ ಇದ್ದರು.
ಪ್ರೀತಿಯವರು ಪುಸ್ತಕದ ಕೆಲವು ಉದಾಹರಣೆಗಳನ್ನು, ನಿದರ್ಶನಗಳನ್ನುವಿವರಿಸಿದರೆ ಜಯಶ್ರೀಯವರು ತಮ್ಮ ನೆನಪಿನ ಬುಟ್ಟಿಯನ್ನು ಬಿಚ್ಚಿ ಅನುಭವವನ್ನುತಿಳಿಸಿದರು . ರಂಗ ಗೀತೆ , ವಚನ ಹಾಡುವುದರ ಮೂಲಕ ಪ್ರೇಕ್ಷಕರ ಮನಸೂರೆಗೊಂಡರೆ ಅವರು ಕೊನೆಯದಾಗಿ ಹಾಡಿದ ರಂಗದ ಚರಮಗೀತೆ ‘ ಸಾವಿರದ ಶರಣವ್ವ ಕರಿಮಾ ಯೇ ತಾಯೇ ‘ ಹಾಡು ಇಡೀ ಸಭಾಂಗಣದಲ್ಲಿ ವಿದ್ಯುತ್ ಸಂಚಾರವನ್ನುಂಟು ಮಾಡಿತು .
ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿದ್ದ ಸ್ವಾಮೀಜಿಗಳವರು ಸಾಧ್ಯವಾದಷ್ಟು ಬಸವ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಕರೆನೀಡಿದರು . ಹೊರದೇಶದಲ್ಲಿದ್ದರು ಬಸವ ಆದರ್ಶಗಳನ್ನು ಎತ್ತಿ ಹಿಡಿಯುತ್ತಿರುವ ಬಸವ ಸಮಿತಿ ದುಬೈ ಕಾರ್ಯ ವೈಖರಿಯನ್ನು ಶ್ಲಾಘಿಸಿದರು.
ಸ್ಥಳೀಯ ಕಲಾವಿದರಿಂದ ಹಾಗು ತಾಯ್ನಾಡಿನಿಂದ ಆಗಮಿಸಿದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು . ಖ್ಯಾತ ಹಿನ್ನೆಲೆ ಗಾಯಕ , ಸಂಗೀತ ನಿರ್ದೇಶಕ ರಾಮಚಂದ್ರ ಹಡಪದ್ ಮತ್ತು ಕನ್ನಡ ಚಲನ ಚಿತ್ರ ಹಿನ್ನೆಲೆ ಗಾಯಕಿ ಅರ್ಪಿತಾ ವೇಣು ಅವರ ಸಂಗೀತ ರಸಮಂಜರಿನೆರೆದವರನ್ನು ಹುಚ್ಛೆದ್ದುಕುಣಿಸಿತು. ಸಂದರ್ಭದಲ್ಲಿ ಕಾರ್ಯಕ್ರಮದ ಪೋಷಕರನ್ನು, ಅಥಿತಿಗಳನ್ನುಹಾಗೂ ಕಲಾವಿದರನ್ನು ಗೌರವಿಸಲಾಯಿತು . ಬಸವ ಸಲಹಾಸಮಿತಿಯ ಸದಸ್ಯರುಗಳಾದ ಸಂಗಮೇಶ್ ಬಿಸರಳ್ಳಿ , ಚಂದ್ರ ಶೇಖರ್ ಲಿಂಗದಳ್ಳಿ , ಸತೀಶ್ ಹಿಂಡೇರ,ಮುರುಗೇಶ್ ಗಾಜರೆ , ಡಾ. ಶಿವಕುಮಾರ್ , ರುದ್ರಯ್ಯ ನವಲಿ ಹಿರೇಮಠ್ , ಜಗದೀಶ್ ಲಾಲಿ , ಡಾ .ಮಮತಾ ರೆಡ್ಡೇರ ರವರುಗಳುಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದ್ದರು . ಶ್ರೀಮತಿ ನೀಮಾ ಹಾಗು ಸುರೇಶ ಚನ್ನಣ್ಣನವರ್ ತಯಾರಿಸಿದ ರುಚಿಕರ ದಾಸೋಹ ಎಲ್ಲರನ್ನೂ ಸಂತೃಪ್ತಗೊಳಿಸಿತು
ಉದಯ ಲಕ್ಷ್ಮಿ ಮತ್ತು ರಶ್ಮಿ ನಾಗಟನ್ ರವರು ಕಾರ್ಯಕ್ರಮವನ್ನು ಸಹ ನಿರೂಪಣೆ ಮಾಡಿದರು ,ಮಂಜುಳಾ ಪರದೆಯ ಹಿಂದೆ ಸಹಕರಿಸಿದರು.ಆರತಿ ಅಡಿಗರವರು ಕಾರ್ಯಕ್ರಮವನ್ನು ನಿರೂಪಿಸಿ ವಂದನಾರ್ಪಣೆಗೈದರು .
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts