ಬಂಟ್ವಾಳ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯಕ್ ಉಳಿಪ್ಪಾಡಿ ಪಿಲಾತಬೆಟ್ಟು ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದರು.
ರಾಜ್ಯ ಸರಕಾರದ ಜನ ವಿರೋಧಿನೀತಿ ಹಾಗೂ ಬಂಟ್ವಾಳ ಕ್ಷೇತ್ರದ ಶಾಸಕರ ನೀತಿಯಿಂದ ಬೇಸತ್ತ ಜನರು ಕ್ಷೇತ್ರದಲ್ಲಿ ಬದಲಾವಣೆಯನ್ನು ಬಯಸುತ್ತಿದ್ದಾರೆ, ರಾಜೇಶ್ ನಾಯಕ್ ಉಳಿಪ್ಪಾಡಿಯವರ ಸಜ್ಜನ ವ್ಯಕ್ತಿತ್ವ ಮತ್ತು ಕೇಂದ್ರದ ನರೇಂದ್ರ ಮೋದಿಯವರ ಜನಪರ ಆಡಳಿತದಿಂದಾಗಿ ಈ ಬಾರಿ ಬಂಟ್ವಾಳದಲ್ಲಿ ಬಿಜೆಪಿ ಗೆಲುವು ನಿಶ್ಚಿತವಾಗಿದೆ. ಶಾಂತಿ ಸಾಮರಸ್ಯದ ಭಯಮುಕ್ತ ಬಂಟ್ವಾಳದ ನಿರ್ಮಾಣಕ್ಕಾಗಿ ಈ ಬಾರಿ ಬಿಜೆಪಿಗೆ ಮತ ನೀಡಬೇಕೆಂದು ಜಿ.ಪಂ ಸದಸ್ಯ ತುಂಗಪ್ಪ ಬಂಗೇರಾ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ಸಚ್ಚಿದಾನಂದ ಶೆಟ್ಟಿ, ರಮೇಶ್ ಕುಡ್ಮೇರು, ಚಂದ್ರಶೇಖರ ಶೆಟ್ಟಿ ,ಹರೀಂದ್ರ ಪೈ, ಪ್ರಶಾಂತ್ ನಯನಾಡು, ಉಮೇಶ್ಕೋಟ್ಯಾನ್, ಪುಷ್ಪಾನಂದ, ಜಯಂತ, ಲಕ್ಷ್ಮೀ ಬಂಗೇರಾ, ಪುರುಷೋತ್ತಮ ಮಜಲು ಮತ್ತು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)