www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಈ ಬಾರಿಯ ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ ಬಂಟ್ವಾಳ ತಾಲೂಕಿನಲ್ಲಿ ಪರೀಕ್ಷೆಗೆ ಕುಳಿತ 5202 ವಿದ್ಯಾರ್ಥಿಗಳ ಪೈಕಿ 4225 ಮಕ್ಕಳು ತೇರ್ಗಡೆ ಹೊಂದಿದ್ದಾರೆ. 2578 ಹುಡುಗರು ಮತ್ತು 2624 ಹುಡುಗಿಯರು ಈ ಬಾರಿ ಪರೀಕ್ಷೆಗೆ ಕುಳಿತಿದ್ದು, ಇವರಲ್ಲಿ 1949 ಹುಡುಗರು ಮತ್ತು 2276 ವಿದ್ಯಾರ್ಥಿನಿಯರು ತೇರ್ಗಡೆ ಹೊಂದಿದ್ದಾರೆ. ಶೇಕಡಾವಾರು ನೋಡಿದರೆ ಶೇ.75.60 ಹುಡುಗರು ಮತ್ತು 86.74 ಹುಡುಗಿಯರು ಪಾಸಾಗಿದ್ದು, ಒಟ್ಟಾರೆಯಾಗಿ ಶೇ.81.22 ಫಲಿತಾಂಶ ಬಂಟ್ವಾಳ ತಾಲೂಕಿಗೆ ದೊರಕಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರೀಕ್ಷೆಗೆ ಕುಳಿದ 13997 ಹುಡುಗರ ಪೈಕಿ 11419, ಹಾಗೂ 14071 ಹುಡುಗಿಯರ ಪೈಕಿ 12595 ತೇರ್ಗಡೆ ಹೊಂದಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 28068 ಮಕ್ಕಳು ಪರೀಕ್ಷೆ ಬರೆದಿದ್ದು, ಅವರಲ್ಲಿ 24014 ಪಾಸಾಗಿದ್ದಾರೆ. ಶೇ.81.58 ಹುಡುಗರು ಮತ್ತು ಶೇ.89.51 ಹುಡುಗಿಯರು ತೇರ್ಗಡೆ ಹೊಂದಿದ್ದು ಒಟ್ಟು ಶೇಕಡಾವಾರು 85.56 ಆಗಿದೆ ಎಂದು ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ. ದಕ್ಷಿಣ ಕನ್ನಡ ಜಿಲ್ಲೆ ಈ ಬಾರಿ ರಾಜ್ಯದಲ್ಲಿ 4ನೇ ಸ್ಥಾನ ಪಡೆದಿದ್ದು, 2017ರಲ್ಲಿ 2ನೇ ಸ್ಥಾನ (82.39) ಪಡೆದಿತ್ತು. ಆದರೆ ಈ ವರ್ಷ ಫಲಿತಾಂಶದಲ್ಲಿ ಶೇ.2.17 ಹೆಚ್ಚಳವಾಗಿದೆ.
ತಾಲೂಕುವಾರು ಫಲಿತಾಂಶ ವಿವರ ಹೀಗಿದೆ.
ಮೂಡುಬಿದಿರೆ: 91.05, ಬೆಳ್ತಂಗಡಿ 88.60, ಮಂಗಳೂರು ಉತ್ತರ 86.60, ಪುತ್ತೂರು 86.14, ಸುಳ್ಯ 84.51, ಮಂಗಳೂರು ದಕ್ಷಿಣ 84.35 ಮತ್ತು ಬಂಟ್ವಾಳ 81.22
ದ.ಕ. ಜಿಲ್ಲೆಯಲ್ಲಿ ಒಟ್ಟು 66 ಶಾಲೆಗಳು ಶೇ.100 ಫಲಿತಾಂಶ ದಾಖಲಿಸಿವೆ. ಇವುಗಳಲ್ಲಿ 10 ಸರಕಾರಿ, 3 ಅನುದಾನಿತ ಮತ್ತು 53 ಅನುದಾನರಹಿತ ಶಾಲೆಗಳು ಸೇರಿವೆ ಎಂದು ದ.ಕ.ಜಿಪಂ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.
ಲಭ್ಯ ಮಾಹಿತಿ ಪ್ರಕಾರ ಬಂಟ್ವಾಳ ತಾಲೂಕಿನ ಟಾಪರ್ ಗಳು
ಸಮನ್ವಿತಾ (619) ವಿಟ್ಲ ಜೇಸಿ ಆಂಗ್ಲ ಮಾಧ್ಯಮ ಶಾಲೆ, ವಿಟ್ಲ
ಪ್ರತಿಜ್ಞಾ ಶೆಟ್ಟಿ (619), ಇನ್ಫೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆ, ಮೊಡಂಕಾಪು
ಮರಿಯಮ್ಮತ್ತುಲ್ ಸಾಮ್ಲಾ 617
ಮರಿಯಮತುಲ್ ಸಲ್ಮ (617) ವಿಟ್ಲ ಜೇಸಿ ಆಂಗ್ಲ ಮಾಧ್ಯಮ ಶಾಲೆ, ವಿಟ್ಲ
ನವೀನ್ ಮಲ್ಲಪ್ಪ (616) ಸತ್ಯಸಾಯಿ ಅಳಿಕೆ
ವಿಧಾತ್ರಿ ಸೋಮಯಾಜಿ (616), ಎಸ್.ವಿ.ಎಸ್. ವಿದ್ಯಾಗಿರಿ, ಬಂಟ್ವಾಳ