ರಾಜಕೀಯ ಪಕ್ಷಗಳು ಮತಯಂತ್ರ ಪ್ರಾತ್ಯಕ್ಷಿಕೆ, ಮತದಾನ ಸ್ಲಿಪ್ ವಿತರಣೆ ಮಾಡುವುದು ಹಿಂದಿನ ಪದ್ಧತಿ. ಆದರೆ ಇದೀಗ ಚುನಾವಣಾ ಆಯೋಗವೇ ಮನೆಮನೆಗೆ ತೆರಳಿ ಓಟರ್‍ಸ್ ಸ್ಲಿಪ್ ಮತ್ತು ಗೈಡ್ ಅನ್ನು ವಿತರಿಸಿದ್ದಾರೆ. ಮತದಾರರಿಗೆ ಸುಲಭವಾಗಿ ಮತ ಚಲಾಯಿಸಲು ಸಹಾಯ ಆಗುವಂತೆ ಈ ಕ್ರಮ ಎನ್ನುತ್ತಾರೆ ಚುನಾವಣಾಧಿಕಾರಿಗಳು.
ಮತದಾರರು ಚುನಾವಣಾ ಆಯೋಗದ ವತಿಯಿಂದ ವಿತರಿಸಿರುವ ಮತದಾರರ ಚೀಟಿಯನ್ನು ಮತ ಚಲಾಯಿಸುವ ಸಮಯದಲ್ಲಿ ತೋರಿಸಿ ಮತ ಚಲಾಯಿಸಬಹುದು. ಬಿಎಲ್ ಒ ಗಳು ಮನೆ ಮನೆಗೆ ಭೇಟಿ ನೀಡಿ ಓಟರ್ ಸ್ಲಿಪ್ ಮತ್ತು ಓಟರ್‍ಸ್ ಗೈಡ್ ಅನ್ನು ವಿತರಿಸಿದ್ದಾರೆ. ಒಂದು ವೇಳೆ ಬಾರದೇ ಇದ್ದರೆ ಮೇ.೭ರಂದು ಅವರವರ ಪ್ರದೇಶದ ಮತಗಟ್ಟೆ ಕೇಂದ್ರದಲ್ಲಿ ಹಾಜರಿರುವ ಬಿಎಲ್‌ಒಗಳನ್ನು ಸಂಪರ್ಕಿಸಿ ಮತದಾರರ ಸ್ಲಿಪ್ ಮತ್ತು ಗೈಡ್ ಅನ್ನು ಪಡೆಯುವ ಅವಕಾಶ ಮತದಾರರಿಗೆ ಇದೆ ಎಂದು ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.