ಸಚಿವ ಬಿ. ರಮಾನಾಥ ರೈಯವರನ್ನು ಚುನಾವಣೆಯ ದೃಷ್ಟಿಯಿಂದ ಅಪಚಾರ ಮೂಲಕ ವಿರೋಧಿಸುತ್ತಾರೆ ಇದು ಬಂಟ್ವಾಳದ ರಾಜಕೀಯದ ವಾಸ್ತವ ಸತ್ಯ ಎಂದು ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹೇಶ್ ನಾಯಕ್ ಅಭಿಪ್ರಾಯ ಪಟ್ಟಿದ್ದಾರೆ.
ಬಿ. ಸಿ. ರೋಡ್ನಲ್ಲಿರುವ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತಾನಾಡಿದರು. ರಮಾನಾಥ ರೈಗಳು ಯಾರ ದ್ವೇಷಿಯೂ ಅಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಕಲ್ಲಡ್ಕ ಪ್ರಭಾಕರ ಭಟ್ಟರು ಕೂಡಾ ತೋರ್ಪಡಿಕೆಯ ವೈರಿಯೇ ಹೊರತು ಚುನಾವಣೆಯಲ್ಲಿ ರೈಗಳನ್ನು ಸೋಲಿಸಿ ಎಂದು ಎಲ್ಲೂ ಹೇಳುವುದಿಲ್ಲ. ಈ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾಮಗಾರಿಗಳೇ ರೈ ಗಳ ಪ್ರಚಾರಕ್ಕೆ ಸಾಕು ಎಂದರು. ಈ ಸಂದರ್ಭದಲ್ಲಿ ಪಾಣೆಮಂಗಳೂರು ಬ್ಲಾಕ್ಅಧ್ಯಕ್ಷ ಅಬ್ಬಾಸ್ ಅಲಿ, ಸಾಮಾಜಿಕ ಜಾಲತಾಣದ ಮುಖ್ಯಸ್ಥ ನವನೀತ ಉಪಸ್ಥಿತರಿದ್ದರು.