ಮಹಿಳೆಗೆ ಸ್ಥಾನಮಾನ, ರಕ್ಷಣೆ ನೀಡಿದ್ದೇ ಕಾಂಗ್ರೆಸ್ ಎಂದು ಬಂಟ್ವಾಳದ ಕಾಂಗ್ರೆಸ್ ಅಭ್ಯರ್ಥಿ ಬಿ.ರಮಾನಾಥ ರೈ ಹೇಳಿದರು.
ಬಿ.ಸಿ.ರೋಡಿನಲ್ಲಿರುವ ಕಾಂಗ್ರೆಸ್ ಪ್ರಚಾರಸಮಿತಿ ಸಭಾಭವನದಲ್ಲಿ ನಡೆದ ಸಜೀಪಮುನ್ನೂರು ಜಿಪಂ ಕ್ಷೇತ್ರ, ಬಂಟ್ವಾಳ ಪುರಸಭೆ, ಕಸ್ಬಾ ವ್ಯಾಪ್ತಿಯ ಮಹಿಳಾ ಕಾಂಗ್ರೆಸ್ ಸಮಾವೇಶದಲ್ಲಿ ಅವರು ಮಾತನಾಡಿದರು.
ಇಂದಿರಾಗಾಂಧಿಯವರು ಈ ದೇಶದಲ್ಲಿ ಮಹಿಳೆಯರಿಗೆ ಸಾಮಾಜಿಕ ಸ್ಥಾನಮಾನ ಹಾಗೂ ಅಧಿಕಾರ ಒದಗಿಸುವ ಕಾನೂನನ್ನು ಜಾರಿಗೆ ತಂದಿದ್ದರೆ, ಮಹಿಳೆಯರಿಗೆ ಕೇವಲ 6 ಟಿಕೆಟ್ ಗಳನ್ನಷ್ಟೇ ಬಿಜೆಪಿ ನೀಡಿದೆ ಎಂದು ರೈ ಹೇಳಿದರು.
ಸುಳ್ಳು ವಿಚಾರ ಹೇಳುತ್ತ ಮನೆ ಬಾಗಿಲಿಗೆ ಬರುವವರನ್ನು ನೇರವಾಗಿ ಪ್ರಶ್ನಿಸಿ ಎಂದ ರೈ,ಕಾಂಗ್ರೆಸ್ ಮಾಡಿರೋದು ಬಂಟ್ವಾಳದ ಅಭಿವೃದ್ಧಿ ಎಂದು ಹೇಳುವಂತೆ ರೈಗಳು ಮಹಿಳೆಯರಲ್ಲಿ ಮನವಿ ಮಾಡಿದರು.
ಬಿಜೆಪಿಯಿಂದ ಮಲ್ಲಿಕಾ, ರಶ್ಮಿ, ಸುಜಾತಾ, ಪಾರ್ವತಿ, ಸವಿತಾ ಕಾಂಗ್ರೆಸ್ ಸೇರ್ಪಡೆಗೊಂಡರು. ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ಬಾಸ್ ಅಲಿ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಜಯಂತಿ ಪೂಜಾರಿ, ಕೆ.ಪಿ.ಸಿ.ಸಿ ಸದಸ್ಯೆ ವಸಂತಿ ಚಂದಪ್ಪ, ಜಿಲ್ಲಾ ಕಾಂಗ್ರೆಸ್ ಸಮಿತಿಯ ಫ್ಲಾಸಿ ಡಿಸೋಜ, ಧನಲಕ್ಷ್ಮಿ ಬಂಗೇರಾ, ರೇವತಿ ಪೂಜಾರಿ, ವೀಣಾಆಚಾರ್ಯ, ತಾಲೂಕು ಪಂಚಾಯತ್ ಸದಸ್ಯೆ ನಸೀಮಾ ಬೇಗಮ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ. ಎಚ್. ಖಾದರ್, ಕೆ ಪಿ ಸಿ ಸಿಯ ಬಿ.ಕೆ. ಇದಿನಬ್ಬ ಮೊದಲಾದವರು ಉಪಸ್ಥಿತರಿದ್ದರು.