ಅಖಿಲ ಭಾರತ ಬ್ಯಾರಿ ಪರಿಷತ್ ಬಂಟ್ವಾಳ ತಾಲೂಕು ಘಟಕ ಸಮಿತಿ ರಚನಾ ಸಭೆ ಇತ್ತೀಚೆಗೆ ಬಿ.ಸಿ.ರೋಡಿನ ಹೋಟೆಲ್ ಶ್ರೀನಿವಾಸ್ ಸಭಾಂಗಣದಲ್ಲಿ ನಡೆಯಿತು.
ಬಂಟ್ವಾಳ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಎಸ್. ಹಸನಬ್ಬ ಫರಂಗಿಪೇಟೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಶಾಹುಲ್ ಹಮೀದ್ ನಂದಾವರ, ಪ್ರಧಾನ ಕಾರ್ಯದರ್ಶಿಯಾಗಿ ಹಾಜಿ ಕೆ.ಎಸ್. ಅಬೂಬಕ್ಕರ್ ಪಲ್ಲಮಜಲು, ಕೋಶಾಧಿಕಾರಿಯಾಗಿ ಎಂ.ಎಸ್. ಸಿದ್ದೀಕ್ ಫರಂಗಿಪೇಟೆ, ಜೊತೆ ಕಾರ್ಯದರ್ಶಿಯಾಗಿ ಲತೀಫ್ ನೇರಳಕಟ್ಟೆ, ಸಂಘಟನಾ ಕಾರ್ಯದರ್ಶಿಯಾಗಿ ಪಿ.ಎಂ. ಅಶ್ರಫ್ ಪಾಣೆಮಂಗಳೂರು, ಯು. ಮುಸ್ತಫ ಆಲಡ್ಕ, ಎಂ.ಕೆ. ಅಬ್ದುಲ್ ಖಾದರ್, ಎ.ಎಂ. ಇಸ್ಮಾಯಿಲ್ ಕೊಡಾಜೆ, ಡಿ. ಹಬೀಬುಲ್ಲ ಕಣ್ಣೂರು ಅವರು ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಬಶೀರ್ ಹಂಡೇಲ್, ಫಾರೂಕ್, ವಿ. ಇಬ್ರಾಹಿಂ ಮುಡಿಪು, ಕೆ.ಎಚ್. ಮುಹಮ್ಮದ್, ನೌಫಲ್, ರಿಝ್ವಿ, ಅಶ್ರಫ್, ಎನ್. ಶಬೀರ್, ಎಂ. ಹಂಝ, ಅಬ್ದುಲ್ ಲತೀಫ್, ಕೆ.ಎಂ. ಅಶ್ರಫ್, ಎ.ಎಚ್. ಅಬ್ದುಲ್ ಸಲಾಂ, ಅಬ್ದುಲ್ ರಝಾಕ್ ಇರಾ ಅವರನ್ನು ನೇಮಿಸಲಾಯಿತು. ಪರಿಷತ್ ಜಿಲ್ಲಾಧ್ಯಕ್ಷ ಜೆ ಹುಸೈನ್ ಜೋಕಟ್ಟೆ ಸಭಾಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಯೂಸುಫ್ ವಕ್ತಾರ್ ಪ್ರಸ್ತಾವೆನೆಗೈದರು. ಸಂಘಟನಾ ಕಾರ್ಯದರ್ಸಿ ಇ.ಕೆ. ಹುಸೈನ್ ಕೂಳೂರು ಸ್ವಾಗತಿಸಿ, ವಂದಿಸಿದರು.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)