ಪಚ್ಚಿನಡ್ಕ ತಿರುವಿನಲ್ಲಿ ಕಲ್ಲು ಸಾಗಾಟದ ಲಾರಿಯೊಂದು ಪ್ರಪಾತಕ್ಕೆ ಪಲ್ಟಿಯಾಗಿ ಚಾಲಕ ಮೃತಪಟ್ಟಿದ್ದು, ಕ್ಲೀನರ್ ಗಾಯಗೊಂಡ ಘಟನೆ ಬುಧವಾರ ರಾತ್ರಿ ನಡೆದಿದೆ. ಮೃತಪಟ್ಟವರನ್ನು ತಣ್ಣೀರುಪಂಥ ನಿವಾಸಿ ಅಶ್ರಫ್ (35) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಕ್ಲೀನರ್ ಕುದ್ರಡ್ಕ ನಿವಾಸಿ ಅಬ್ದುಲ್ ಕರೀಂ (40) ಗಾಯಗೊಂಡಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾತ್ರಿ ಕಲ್ಲುಗಳನ್ನು ಹೇರಿಕೊಂಡಿದ್ದ ಲಾರಿಯೊಂದು ಬಿ.ಸಿ.ರೋಡಿಗೆ ಬರುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಈ ಘಟನೆ ನಡೆದಿದ್ದು, ವಾಹನದಲ್ಲಿ ಇಬ್ಬರೇ ಇದ್ದರು ಎಂದು ಬಂಟ್ವಾಳ ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.
ಆಳವಾದ ಜಾಗಕ್ಕೆ ಲಾರಿ ಬಿದ್ದ ಕಾರಣ ಅದನ್ನು ಮೇಲಕ್ಕೆತ್ತಲು ಅಗ್ನಿಶಾಮಕ ದಳ ಬಂದರೂ ವಿಫಲವಾಯಿತು. ಗುರುವಾರ ಬೆಳಗ್ಗಿನ ಜಾವ ಕ್ರೇನ್ ನ ಸಹಾಯದಿಂದ ಮೇಲಕ್ಕೆತ್ತಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…