ವಿಧಾನಸಭಾ ಕ್ಷೇತ್ರ ಬಂಟ್ವಾಳ ಕ್ಕೆ ಸಂಬಂಧಿಸಿದಂತೆ ಮತಗಟ್ಟೆ ಬದಲಾವಣೆ ಮತ್ತು ಹೆಚ್ಚುವರಿ ಮತಗಟ್ಟೆಗಳಿಗೆ ಸಂಬಂಧಿಸಿದಂತೆ 205- ಬಂಟ್ವಾಳ ವಿಧಾನಸಭಾ ಕ್ಷೇತ್ರದ 246 ಮತಗಟ್ಟೆಗಳ ಪೈಕಿ 6 ಮತಗಟ್ಟೆಗಳ ಹೆಸರು /ಸ್ಥಳ ಬದಲಾವಣೆಯಾಗಿದ್ದು, 1,300ಕ್ಕಿಂತ ಹೆಚ್ಚು ಮತದಾರರಿರುವ ಮತಗಟ್ಟೆಗಳಲ್ಲಿ 3 ಹೆಚ್ಚುವರಿ ಮತಗಟ್ಟೆಗಳನ್ನು ಸೃಜಿಸಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ, ಬಂಟ್ವಾಳ ತಹಶೀಲ್ದಾರ್ ವೈ. ರವಿ ತಿಳಿಸಿದ್ದಾರೆ.
ಬದಲಾದ ಮತಗಟ್ಟೆ
ಭಾಗ 11 -ಎಲಿಯನಡುಗೋಡು ದ.ಕ. ಜಿ.ಪಂ. ಹಿ.ಪ್ರಾ. ಶಾಲೆ ಹಳೆ ಮತಗಟ್ಟೆ ಬದಲಾಗಿ ಎಲಿಯನಡುಗೋಡು ಬದ್ಯಾರು ಅಂಗನವಾಡಿ ಕಟ್ಟಡ ಹೊಸ ಮತಗಟ್ಟೆ .
ಭಾಗ 25- ಪಿಲಿಮೊಗರು ದ.ಕ. ಜಿ.ಪಂ. ಹಿ.ಪ್ರಾ. ಶಾಲೆಯ ಮತಗಟ್ಟೆ ಬದಲಾಗಿ ಚೆನ್ನೈತ್ತೋಡಿ ಉನ್ನತೀಕರಿಸಿದ ಸ.ಮಾ. ಹಿ.ಪ್ರಾ. ಶಾಲೆಯ (ದಕ್ಷಿಣ ಭಾಗ) ಮತಗಟ್ಟೆ.
ಭಾಗ 39-ಕರಿಯಂಗಳ ಪೊಳಲಿ ಶ್ರೀ ವಿದ್ಯಾ ವಿಲಾಸ ಹಿ.ಪ್ರಾ. ಶಾಲೆ ಮತಗಟ್ಟೆ ಬದಲಾಗಿ ಕರಿಯಂಗಳ ಪೊಳಲಿ ಸರಕಾರಿ ಪ್ರೌಢಶಾಲೆ (ಪಶ್ಚಿಮ ಭಾಗ) ಮತಗಟ್ಟೆ.
ಭಾಗ 41- ಕರಿಯಂಗಳ ಪೊಳಲಿ ಶ್ರೀ ವಿದ್ಯಾ ವಿಲಾಸ ಹಿ.ಪ್ರಾ. ಶಾಲೆ ಮತಗಟ್ಟೆ ಬದಲಾಗಿ ಕರಿಯಂಗಳ ಪೊಳಲಿ ಸರಕಾರಿ ಪ್ರೌಢಶಾಲೆ (ಪೂರ್ವ ಭಾಗ) ಮತಗಟ್ಟೆ.
ಭಾಗ 56- ಪಂಜಿಕಲ್ಲು ಸೊರ್ನಾಡು ಸೈಂಟ್ ಆಂಡ್ರೋಸ್ ಹಿ.ಪ್ರಾ. ಶಾಲೆಯ ಮತಗಟ್ಟೆ ಬದಲಾಗಿ ಪಂಜಿಕಲ್ಲು ಗ್ರಾ.ಪಂ. ಲೈಬ್ರೆರಿಯ ಗ್ರಾ.ಪಂ. ಕಟ್ಟಡ ಮತಗಟ್ಟೆ.
ಭಾಗ 68- ಬಿ. ಕಸ್ಬಾ ದ.ಕ. ಜಿ.ಪಂ. ಹಿ.ಪ್ರಾ. ಶಾಲೆ ಮತಗಟ್ಟೆಯ ಬದಲಾಗಿ ಬಂಟ್ವಾಳ ಕಸ್ಬಾ ಎಸ್ ವಿಎಸ್ ದೇಗುಲ ಆಂಗ್ಲ ಮಾಧ್ಯಮ ಶಾಲೆ (ಪೂರ್ವ ಭಾಗ) ಮತಗಟ್ಟೆ.
ಹೆಚ್ಚುವರಿ ಮತಗಟ್ಟೆ
1. ಭಾಗ 123-ಬಿ. ಮೂಡ ಕೊಡಂಗೆ ದ.ಕ. ಜಿ.ಪಂ. ಹಿ.ಪ್ರಾ. ಶಾಲೆಯ (ಉತ್ತರ ಭಾಗ) ಮತಗಟ್ಟೆ ಜತೆಗೆ ಭಾಗ 123 ಎ- ಬಿ. ಮೂಡ ಕೊಡಂಗೆ ದ.ಕ. ಜಿ.ಪಂ. ಹಿ.ಪ್ರಾ. ಶಾಲೆಯ (ಉತ್ತರ ಭಾಗ) ಮತಗಟ್ಟೆ.
2. ಭಾಗ 204- ವೀರಕಂಭ ಕೆಲಿಂಜ ದ.ಕ. ಜಿ.ಪಂ. ಹಿ.ಪ್ರಾ. ಶಾಲೆಯ (ದಕ್ಷಿಣ ಭಾಗ) ಮತಗಟ್ಟೆ ಜತೆಗೆ ಭಾಗ 204 ಎ – ವೀರಕಂಭ ಕೆಲಿಂಜ ದ.ಕ. ಜಿ.ಪಂ. ಹಿ.ಪ್ರಾ. ಶಾಲೆಯ (ಪೂರ್ವ ಭಾಗ) ಮತಗಟ್ಟೆ.
3. ಭಾಗ 242- ಕನ್ಯಾನ ಬಂಡಿ ತ್ತಡ್ಕ ದ.ಕ. ಜಿ.ಪಂ. ಹಿ.ಪ್ರಾ. ಶಾಲೆ (ಉತ್ತರ ಭಾಗ) ಮತಗಟ್ಟೆ ಜತೆಗೆ ಭಾಗ 242 ಎ-ಕನ್ಯಾನ ಬಂಡಿತ್ತಡ್ಕ ದ.ಕ. ಜಿ.ಪಂ. ಹಿ.ಪ್ರಾ. ಶಾಲೆ (ದಕ್ಷಿಣ ಭಾಗ)