ಬಂಟ್ವಾಳ

ಬಂಟ್ವಾಳ ಕ್ಷೇತ್ರ: ಚುನಾವಣಾ ಸಿಬ್ಬಂದಿಗೆ ತರಬೇತಿ

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಂಟ್ವಾಳ ಕ್ಷೇತ್ರದ 287 ಪಿಆರ್ ಒ ಮತ್ತು 375 ಎಪಿಆರ್ ಓ ಗಳಿಗೆ ಮೊಡಂಕಾಪು ಇನ್ ಫೆಂಟ್ ಜೀಸಸ್ ಶಾಲೆಯಲ್ಲಿ ತರಬೇತಿಯನ್ನು ನೀಡಲಾಯಿತು.

ಈ ಸಂದರ್ಭ 21 ಸೆಕ್ಟರ್ ಅಧಿಕಾರಿಗಳು ಮತ್ತು ಐವರು ಮಾಸ್ಟರ್ ತರಬೇತಿದಾರರು ಉಪಸ್ಥಿತರಿದ್ದು ತರಬೇತಿ ನೀಡಿದರು. 249 ಮತಗಟ್ಟೆಗಳ ಬಂಟ್ವಾಳ ಕ್ಷೇತ್ರದ ಚುನಾವಣಾ ತರಬೇತಿ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಅಂಚೆ ಮತಪತ್ರದ ಕುರಿತ ಅರ್ಜಿಯನ್ನು ಸ್ವೀಕರಿಸಲಾಯಿತು.

ಚುನಾವಣಾ ಧಿಕಾರಿ ರವಿ ಬಸರಿಹಳ್ಳಿ, ಸಹಾಯಕ ಚುನಾವಣಾ ಧಿಕಾರಿ ವೈ ರವಿ, ಎಮ್.ಸಿ.ಸಿ ನೋಡೆಲ್ ಅಧಿಕಾರಿ ಇ.ಒ.ರಾಜಣ್ಣ,  ತರಭೇತಿ ಯ ಉಸ್ತುವಾರಿ ಶಿವಪ್ರಕಾಶ್ , ಉಪತಹಶೀಲ್ದಾರ ವಾಸು ಶೆಟ್ಟಿ, ಎ .ಪ್ರಕಾಶ್, ರಾಜೇಶ್ ನಾಯಕ್, ಗ್ರೀಟಾ ಮಸ್ಕರೇನಸ್, ಸೀತಾರಾಮ, ಚುನಾವಣಾ ಸಿಬ್ಬಂದಿ ಗಳಾದ ರಾಜ್ ಕುಮಾರ್, ವಿನಯನಾಗರಾಜ್, ಕಂದಾಯ ನಿರೀಕ್ಷಕ ನವೀನ್ ಬೆಂಜನಪದವು ಮತ್ತಿತರರು ಹಾಜರಿದ್ದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts