ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ಘೋಷಿತ ಅಭ್ಯರ್ಥಿಗಳನ್ನು ಗಮನಿಸಿದರೆ ಸುಳ್ಯ ಮೀಸಲು ಕ್ಷೇತ್ರ ಹೊರತುಪಡಿಸಿದರೆ, ಕಾಂಗ್ರೆಸ್ ಪಕ್ಷದಿಂದ ಇಬ್ಬರು ಬಂಟ ಸಮುದಾಯದವರು (ರಮಾನಾಥ ರೈ, ಶಕುಂತಳಾ ಶೆಟ್ಟಿ), ನಾಲ್ವರು ಅಲ್ಪಸಂಖ್ಯಾತ ಸಮುದಾಯದವರು (ಖಾದರ್, ಬಾವಾ, ಅಭಯಚಂದ್ರ, ಲೋಬೊ) ಹಾಗೂ ಒಬ್ಬರು ಬಿಲ್ಲವ ಸಮುದಾಯದವರು (ವಸಂತ ಬಂಗೇರ) ಅಭ್ಯರ್ಥಿಯಾಗಿದ್ದಾರೆ. ಬಿಜೆಪಿಯಿಂದ ನಾಲ್ವರು ಬಂಟ ಸಮುದಾಯದವರು (ಭರತ್ ಶೆಟ್ಟಿ, ಸಂತೋಷ್ ರೈ, ರಾಜೇಶ್ ನಾಯ್ಕ್, ಹರೀಶ್ ಪೂಂಜ) ಒಬ್ಬರು ಬಿಲ್ಲವ (ಉಮಾನಾಥ ಕೋಟ್ಯಾನ್), ಒಬ್ಬರು ಗೌಡಸಾರಸ್ವತ ಬ್ರಾಹ್ಮಣ (ವೇದವ್ಯಾಸ ಕಾಮತ್) ಮತ್ತು ಒಬ್ಬರು ಒಕ್ಕಲಿಗ (ಸಂಜೀವ ಮಠಂದೂರು) ರು ಟಿಕೆಟ್ ಪಡೆದಿದ್ದಾರೆ. ಒಟ್ಟಾರೆಯಾಗಿ ಬಂಟ ಸಮುದಾಯದ ಅಭ್ಯರ್ಥಿಗಳು 6, ಅಲ್ಪಸಂಖ್ಯಾತರು 4(ಮುಸ್ಲಿಂ 2, ಕ್ರೈಸ್ತರು 1, ಜೈನರು 1,) ಬಿಲ್ಲವರು 2, ಒಕ್ಕಲಿಗರು 1, ಜಿಎಸ್ ಬಿ -1 ಅಭ್ಯರ್ಥಿಗಳು ಕಣಕ್ಕಿಳಿದಿದ್ದರೆ, ಇವರಲ್ಲಿ ಬಂಟ-ಬಂಟರ ಮುಖಾಮುಖಿ ಬಂಟ್ವಾಳ ಕ್ಷೇತ್ರದಲ್ಲಿ ಆಗುವುದು ಗಮನಾರ್ಹ.