ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಏಪ್ರಿಲ್ 27ರಂದು ಬಂಟ್ವಾಳಕ್ಕೆ ಆಗಮಿಸಿ ಪ್ರಚಾರ ಭಾಷಣ ಮಾಡಲಿದ್ದಾರೆ. ಈ ಮೂಲಕ ದ.ಕ. ಚುನಾವಣಾ ಪ್ರಚಾರ ಕಾರ್ಯ ರಂಗೇರಲಿದೆ. ಈ ವಿಷಯವನ್ನು ತಿಳಿಸಿದ ಗುರುವಾರ ಬಂಟ್ವಾಳದ ಮಿನಿ ವಿಧಾನಸೌಧದಲ್ಲಿರುವ ಚುನಾವಣಾ ಕಚೇರಿಗೆ ನಾಮಪತ್ರ ಸಲ್ಲಿಸುವ ಮುನ್ನ ನಡೆದ ಪಕ್ಷದ ಸಭೆಯಲ್ಲಿ ರಮಾನಾಥ ರೈ, ರಾಹುಲ್ ಭೇಟಿ ಕಾರ್ಯಕ್ರಮವನ್ನು ನಭೂತೋ ನಭವಿಷ್ಯತಿ ಎಂಬಂತೆ ನಿರ್ವಹಿಸುವಂತೆ ಕರೆ ನೀಡಿದರು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…