ಆರೋಗ್ಯ ರಕ್ಷಣೆಗಾಗಿ ಹಾಗೂ ಮಾಲಿನ್ಯ ನಿಯಂತ್ರಣ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜೇಸೀಐ ಜೋಡುಮಾರ್ಗ ನೇತ್ರಾವತಿ ಉತ್ತಮ ಕಾರ್ಯ ನಿರ್ವಹಿಸುತ್ತಿದೆ ಎಂದು ಪತ್ರಕರ್ತ ಹರೀಶ್ ಮಾಂಬಾಡಿ ಹೇಳಿದರು.
ಜೇಸೀ ಐ ಜೋಡುಮಾರ್ಗ ನೇತ್ರಾವತಿ ವತಿಯಿಂದ ವಿಶ್ವ ಶಾಂತಿಗಾಗಿ ಒಂದು ದಿನದ ಬೈಸಿಕಲ್ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಾಥಾ ಕೈಕಂಬ ಪೊಳಲಿ ದ್ವಾರದ ಮೂಲಕ ನಾರಾಯಣ ಗುರು ವೃತ್ತದವರೆಗೆ ಜೇಸೀ ಕುಟುಂಬದ ಹಾಗೂ ಸಾರ್ವಜನಿಕ ಸಹಕಾರ ದೊಂದಿಗೆ ಸಾಗಿತು. ಮುಖ್ಯ ಅತಿಥಿಗಳಾಗಿ ಜೇಸೀ ಐ ಮಂಗಳೂರು ಸಾಮ್ರಾಟ್ ಅಧ್ಯಕ್ಷ ರಾದ ಡಾ ರಾಘವೇಂದ್ರ ಹೊಳ್ಳ , ಜೇಸೀ ಐ ಜೋಡುಮಾರ್ಗ ನೇತ್ರಾವತಿ ಯ ಮಾಜಿ ಅಧ್ಯಕ್ಷರಾದ ಜಯಾನಂದ ಪೆರಾಜೆ, ನವೀನ್ ಚಂದ್ರ ಶೆಟ್ಟಿ, ಉಮೇಶ್ ನಿರ್ಮಲ್, ಉಪಾಧ್ಯಕ್ಷ ರಾದ ಧೀರಜ್ ಹೆಬ್ರಿ, ಜಯರಾಜ್ ಎಸ್ ಬಂಗೇರ, ಜೇಸಿರೆಟ್ ವಿಭಾಗದ ಅಧ್ಯಕ್ಷೆ ಗಾಯತ್ರಿ ಲೋಕೇಶ್ ಉಪಸ್ತಿತರಿದ್ದರು.
ಜೇಸಿ ಐ ಜೋಡುಮಾರ್ಗ ನೇತ್ರಾವತಿ ಅಧ್ಯಕ್ಷರಾದ ಸವಿತಾ ನಿರ್ಮಲ್ ಸ್ವಾಗತಿಸಿ ದರು. ಕಾರ್ಯದರ್ಶಿ ಹರ್ಷರಾಜ್ ಧನ್ಯವಾದ ಸಲ್ಲಿಸಿದರು. ಕಾರ್ಯಕ್ರಮವನ್ನು ಹರಿಪ್ರಸಾದ್ ಕುಲಾಲ್ ಸಂಯೋಜಿಸಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…